ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿನ್‌ಲೆಂಡ್‌ ತಂಡಕ್ಕೆ ತರಬೇತಿ ನೀಡುತ್ತಿರುವ ಮಹೇಶ್‌

ಲಾಕ್‌ಡೌನ್‌ ಅವಧಿಯ ಸೂಕ್ತ ಬಳಕೆ ಮಾಡಿಕೊಂಡ ಭಾರತದ ಸ್ಕ್ವಾಷ್‌ ಆಟಗಾರ
Last Updated 27 ಜೂನ್ 2020, 11:37 IST
ಅಕ್ಷರ ಗಾತ್ರ

ಮುಂಬೈ: ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಭಾರತದಲ್ಲಿ ಆಗಸ್ಟ್‌ 15ರವರೆಗೆ ಯಾವುದೇ ವೃತ್ತಿಪರ ಸ್ಕ್ವಾಷ್‌ ಚಟುವಟಿಕೆಗಳು ನಡೆಯುತ್ತಿಲ್ಲ. ಈ ವೇಳೆ ಫಿನ್‌ಲೆಂಡ್ ರಾಜಧಾನಿ ಹೆಲ್ಸಿಂಕಿಯಲ್ಲಿರುವ ಭಾರತದ ಆಟಗಾರ ಮಹೇಶ್‌ ಮನಗಾಂವಕರ್‌ ಅಲ್ಲಿಯ ರಾಷ್ಟ್ರೀಯ ತಂಡಕ್ಕೆ ತರಬೇತಿ ನೀಡುವ ಕಾರ್ಯದಲ್ಲಿದ್ದಾರೆ.

ವಿಶ್ವ ಕ್ರಮಾಂಕದಲ್ಲಿ 49ನೇ ಸ್ಥಾನದಲ್ಲಿರುವ ಮಹೇಶ್‌, ಫಿನ್‌ಲೆಂಡ್‌ ಸ್ಕ್ವಾಷ್‌ ಫೆಡರೇಷನ್‌ನಿಂದ ಈ ಅವಕಾಶ ಪಡೆಯುವ ಮೊದಲು ನೆದರ್ಲೆಂಡ್ಸ್‌ನಲ್ಲಿದ್ದರು.

ಫಿನ್‌ಲೆಂಡ್‌ನಲ್ಲಿ ಕೊರೊನಾ ವೈರಸ್‌ ಸಂಬಂಧಿತ ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ಹೆಲ್ಸಿಂಕಿಯಲ್ಲಿ ತರಬೇತಿ ಆರಂಭಿಸಿದ್ದರು.

‘ಲಾಕ್‌ಡೌನ್‌ ಅವಧಿಯಲ್ಲಿ ಸ್ಕ್ವಾಷ್‌ ಹೊರತುಪಡಿಸಿ ಬೇರೆ ಕೆಲಸ ಏನು ಮಾಡಬಹುದು ಎಂದು ಯೋಚಿಸುತ್ತಿದ್ದೆ. ಫಿಟ್‌ನೆಸ್‌ ಕಡೆ ಆಸಕ್ತಿ ಬೆಳೆಯಿತು. ಸ್ಕ್ವಾಷ್‌ ತರಬೇತಿಯ ಕುರಿತು ಒಲವೂ ಹೆಚ್ಚಿತು’ ಎಂದು 26 ವರ್ಷದ ಮಹೇಶ್‌ ಹೇಳಿದ್ದಾರೆ.

‘ಫೆಬ್ರುವರಿಯಿಂದ ಮಿಕ್ಸೆಡ್‌ ಮಾಡೆಲ್‌ ಮೂವ್‌ಮೆಂಟ್‌ ಪ್ರೋಗ್ರಾಮ್‌ ಹೆಸರಿನ ಪರಿಕ್ಷೆಗಾಗಿ ಅಧ್ಯಯನ ನಡೆಸುತ್ತಿದ್ದೇನೆ. ಈ ಪರೀಕ್ಷೆಯು ಟೆನಿಸ್‌, ಈಜು, ಸ್ಕ್ವಾಷ್‌, ಬ್ಯಾಡ್ಮಿಂಟನ್ ಹಾಗೂ ಹಾಕಿಯಂತಯಹ ನಿರ್ದಿಷ್ಟ ಕ್ರೀಡೆಗಳ ತರಬೇತಿಯನ್ನು ಒಳಗೊಂಡಿದೆ’ ಎಂದು ಮಹೇಶ್‌ ನುಡಿದರು.

‘ಸದ್ಯ ನಾನು ಫಿಟ್‌ನೆಸ್‌ ತರಬೇತಿಯಲ್ಲಿ ಪ್ರಮಾಣ ಪತ್ರ ಪಡೆದಿದ್ದೇನೆ. ಕ್ರೀಡಾ ಸಾಮರ್ಥ್ಯ ವೃದ್ಧಿಗಾಗಿ ಇರುವ ತರಬೇತುದಾರನಾಗಲು ಪ್ರಯತ್ನಿಸುತ್ತಿದ್ದೇನೆ’ ಎಂದು ಮಹೇಶ್‌ ಹೇಳಿದ್ದಾರೆ.

ಈಗಾಗಲೇ ಉತ್ತಮ ಅರ್ಹತೆಯುಳ್ಳ ಸ್ಕ್ವಾಷ್‌ ಕೋಚ್‌ ಪ್ರಮಾಣಪತ್ರ ಪಡೆದಿರುವ ಮಹೇಶ್‌, ತಾನು ಹೆಚ್ಚುವರಿಯಾಗಿ ಪಡೆಯಲಿರುವ ಫಿಟ್‌ನೆಸ್‌ ಪ್ರಮಾಣಪತ್ರ ಸಹಾಯಕ್ಕೆ ಬರಲಿದೆ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT