ಗುರುವಾರ , ಜೂನ್ 24, 2021
29 °C

ಟೇಕ್ವಾಂಡೊ: ರೆಫರಿ, ಅಥ್ಲೀಟ್‌ಗಳ ಸಮಿತಿ ರಚನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಅಥ್ಲೀಟ್‌ಗಳ ಕಲ್ಯಾಣಕ್ಕಾಗಿ ರೆಫರಿಗಳು ಹಾಗೂ ಅಥ್ಲೀಟ್‌ಗಳ ಸಮಿತಿ ರಚಿಸುವುದಾಗಿ ಭಾರತ ಟೇಕ್ವಾಂಡೊ (ಐಟಿ) ಸೋಮವಾರ ತಿಳಿಸಿದೆ. 

‘ವಿಶ್ವ ಟೇಕ್ವಾಂಡೊ ಮಂಡಳಿಯ ಮಾರ್ಗಸೂಚಿಗಳ ಪ್ರಕಾರ ನ್ಯಾಯಯುತವಾಗಿ ಆಟವನ್ನು ಆಡಿಸುವ ಕುರಿತು ತೀರ್ಪುಗಾರರಿಗೆ ತರಬೇತಿ ನೀಡುವ ಕಾರ್ಯವನ್ನು ರೆಫರಿಗಳ ಸಮಿತಿ ಮಾಡಲಿದೆ‘ ಎಂದು ಐಟಿ ಹೇಳಿದೆ. 

ಅಥ್ಲೀಟ್‌ಗಳ ಸಮಿತಿಯು ಅಥ್ಲೀಟ್‌ಗಳ ಹಿತಾಸಕ್ತಿ ಕಾಯುವ ಹಾಗೂ ಅವರ ಎಲ್ಲ ಸಮಸ್ಯೆಗಳನ್ನು ಸ್ಪಂದಿಸುವ ಕೆಲಸವನ್ನು ಮಾಡಲಿದೆ.

ಈ ಕುರಿತು ಕಾರ್ಯಚಟುವಟಿಕೆಗಳನ್ನು ಆರಂಭಿಸಲು ವಿಶ್ವ ಟೇಕ್ವಾಂಡೊದಿಂದ ಅನುಮತಿ ಪಡೆದಿರುವುದಾಗಿ ಐಟಿ ಹೇಳಿದೆ.

ವಿಶ್ವ ಟೇಕ್ವಾಂಡೊ ಇತ್ತೀಚೆಗೆ ಐಟಿಗೆ ಪತ್ರವೊಂದನ್ನು ಬರೆದಿದೆ.‘2020ರ ಮೇ 12ರಂದು ನಡೆದ ವಿಶ್ವ ಟೇಕ್ವಾಂಡೊ ಕೌನ್ಸಿಲ್‌ ಸಭೆಯು, ಭಾರತದ ಮಂಡಳಿಯು ಸಾಧಿಸಿದ ಪ್ರಗತಿಯನ್ನು ಗುರುತಿಸಿ ಅದರ ಸಂಪೂರ್ಣ ಸದಸ್ಯತ್ವವನ್ನು ಮರುಸ್ಥಾಪಿಸಲು ಸರ್ವಾನುಮತದಿಂದ ಅಂಗೀಕರಿಸಿದೆ‘ ಎಂದು ವಿಶ್ವ ಟೇಕ್ವಾಂಡೊ ಪ್ರಧಾನ ಕಾರ್ಯದರ್ಶಿ ಹಾಸ್‌ ರೆಫೆಟಿ ಅವರು ಈ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು