ರಾಜ್ಯದ ಪ್ರತ್ಯಾನ್ಶು, ಪ್ರಶಾಂತ್‌ಗೆ ಸ್ಥಾನ

7
ಫಿಬಾ ಏಷ್ಯಾ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ಗೆ ಭಾರತ ತಂಡ

ರಾಜ್ಯದ ಪ್ರತ್ಯಾನ್ಶು, ಪ್ರಶಾಂತ್‌ಗೆ ಸ್ಥಾನ

Published:
Updated:
Deccan Herald

ಬೆಂಗಳೂರು: ಕರ್ನಾಟಕದ ಪ್ರತ್ಯಾನ್ಶು ತೋಮರ್‌ ಮತ್ತು ಪ್ರಶಾಂತ್‌ ತೋಮರ್‌ ಅವರು ಫಿಬಾ ಏಷ್ಯಾ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ಗೆ ಗುರುವಾರ ಪ್ರಕಟಿಸಲಾಗಿರುವ 18 ವರ್ಷದೊಳಗಿನ ಭಾರತ ಪುರುಷರ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಆಗಸ್ಟ್‌ 5ರಿಂದ 11ರವರೆಗೆ ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ನಡೆಯುವ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡ ‘ಡಿ’ ಗುಂಪಿನಲ್ಲಿ ಆಡಲಿದೆ. ದಕ್ಷಿಣ ಕೊರಿಯಾ, ಚೀನಾ ತೈಪೆ ಮತ್ತು ಸಿರಿಯಾ ತಂಡಗಳೂ ಇದೇ ಗುಂಪಿನಲ್ಲಿ ಸ್ಥಾನ ಗಳಿಸಿವೆ.

ಹಾಲಿ ಚಾಂಪಿಯನ್‌ ಇರಾನ್‌, ಆಸ್ಟ್ರೇಲಿಯಾ, ಬಹ್ರೇನ್‌, ಚೀನಾ, ಇಂಡೊನೇಷ್ಯಾ, ಜಪಾನ್‌, ಕಜಕಸ್ತಾನ, ಲೆಬನಾನ್‌, ನ್ಯೂಜಿಲೆಂಡ್‌, ಫಿಲಿಪ್ಪೀನ್ಸ್‌ ಮತ್ತು ಯುಎಇ ತಂಡಗಳೂ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

ಟೂರ್ನಿಯಲ್ಲಿ ಭಾಗವಹಿಸಿರುವ 16 ತಂಡಗಳನ್ನು ನಾಲ್ಕು ಗುಂಪುಗಳನ್ನಾಗಿ ವಿಭಾಗಿಸಲಾಗಿದೆ. ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು ನೇರವಾಗಿ ನಾಕೌಟ್‌ ಪ್ರವೇಶಿಸಲಿವೆ. ಎರಡು ಮತ್ತು ಮೂರನೆ ಸ್ಥಾನ ಪಡೆಯುವ ತಂಡಗಳು ‘ಪ್ಲೇ ಆಫ್‌’ ಸುತ್ತಿನಲ್ಲಿ ಸೆಣಸಲಿವೆ.

ಆಗಸ್ಟ್‌ 5ರಂದು ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ಚೀನಾ ತೈಪೆ ವಿರುದ್ಧ ಸೆಣಸಲಿದೆ. ಆಗಸ್ಟ್‌ 6 ಮತ್ತು 7ರಂದು ಕ್ರಮವಾಗಿ ದಕ್ಷಿಣ ಕೊರಿಯಾ ಮತ್ತು ಸಿರಿಯಾ ವಿರುದ್ಧ ಹೋರಾಡಲಿದೆ.

ತಂಡ ಇಂತಿದೆ: ಜಗಶಾನ್‌ಬಿರ್‌ ಸಿಂಗ್‌, ಅಭಿಷೇಕ್‌ ಶರ್ಮಾ, ಪ್ರತ್ಯಾನ್ಶು ತೋಮರ್‌, ಪ್ರಿನ್ಸಿಪಾಲ್‌ ಸಿಂಗ್‌, ಸೆಜಿನ್‌ ಮ್ಯಾಥ್ಯೂ, ಹರ್ಷವರ್ಧನ್‌ ತೋಮರ್‌, ರಾಜವೀರ್‌ ಭಾಟಿ, ರಾಜೀವ್‌ ಕುಮಾರ್‌, ಪ್ರಶಾಂತ್‌ ರಾವತ್‌, ತುಷಾಲ್‌ ಸಿಂಗ್‌, ಎಂ.ಅರವಿಂದ್‌ ಕುಮಾರ್‌ ಮತ್ತು ಪ್ರಶಾಂತ್‌ ತೋಮರ್‌.

ಮುಖ್ಯ ಕೋಚ್‌: ಅಮನ್‌ ಶರ್ಮಾ, ಸಹಾಯಕ ಕೋಚ್‌: ಎಚ್‌.ಲಾಲ್ದಿನ್‌ಸಂಗಾ, ಫಿಸಿಯೊ: ರಂಜನ್‌ ಶರ್ಮಾ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !