ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್‌: ಭಾರತಕ್ಕೆ ಏಳು ಪದಕ

ಏಷ್ಯನ್‌ ಯೂತ್‌ ಬಾಕ್ಸಿಂಗ್‌ ಚಾಂಪಿಯನ್‌ಷಿ‍ಪ್‌
Last Updated 17 ನವೆಂಬರ್ 2019, 20:29 IST
ಅಕ್ಷರ ಗಾತ್ರ

ಉಲಾನ್‌ಬತಾರ್‌ (ಮಂಗೋಲಿಯಾ): ಏಷ್ಯನ್‌ ಯೂತ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಬಾಕ್ಸರ್‌ಗಳು ಭಾನುವಾರ ಏಳು ಪದಕಗಳನ್ನು ಜಯಿಸಿದರು. ಮಹಿಳೆಯರು ಐದು ಸ್ವರ್ಣ ಗೆದ್ದರೆ, ಪುರುಷ ಸ್ಪರ್ಧಿಗಳು ಎರಡು ಬೆಳ್ಳಿ ತಮ್ಮದಾಗಿಸಿಕೊಂಡರು.

ಶನಿವಾರ ಫೈನಲ್‌ ತಲುಪಿದ್ದ ನೊರೆಮ್‌ ಚಾನು (51 ಕೆಜಿ ವಿಭಾಗ), ಸನಮಾಚಾ ಚಾನು (75 ಕೆಜಿ), ಪೂನಂ (54 ಕೆಜಿ), ವಿಂಕಾ (64 ಕೆಜಿ) ಹಾಗೂ ಸುಷ್ಮಾ (81 ಕೆಜಿ) ಪ್ರಶಸ್ತಿ ಸುತ್ತಿನ ಬೌಟ್‌ಗಳಲ್ಲಿ ಚಿನ್ನದ ಪಂಚ್‌
ನೀಡಿದರು.

ಪುರುಷರ ವಿಭಾಗದಲ್ಲಿ ಸೇಲಾಯ್‌ ಸಾಯ್‌ (49 ಕೆಜಿ) ಹಾಗೂ ಅಂಕಿತ್‌ ನರ್ವಾಲ್‌ (60 ಕೆಜಿ) ಅವರು ಫೈನಲ್‌ ಪಂದ್ಯಗಳಲ್ಲಿ ಸೋತು ಬೆಳ್ಳಿ ಪದಕ ಗಳಿಸಿದರು.

ಸಾಯ್‌ ಅವರು ಅಂತಿಮ ಹಣಾಹಣಿಯಲ್ಲಿ ಕಜಕಸ್ತಾನದ ಬಜರ್‌ಬಾಯ್‌ ಉಲ್ಲು ಮುಖಾಮೆಡ್ಸೆಫಿ ಎದುರು ಸೋತರೆ, ನರ್ವಾಲ್ ಅವರು ಜಪಾನ್‌ನ ರಿಟೊ ಸುತ್ಸುಮೆ ವಿರುದ್ಧ ಮಣಿದರು.

ಮಹಿಳಾ ವಿಭಾಗದಲ್ಲಿ ಪೂನಂ ಅವರು ಚೀನಾದ ವೇಕಿ ಕಾಯ್‌ ಎದುರು ಗೆದ್ದು ಭಾರತದ ಚಿನ್ನದ ಪದಕದ ಖಾತೆ ತೆರೆದರು. ಕಜಕಸ್ತಾನದ ಬಾಕಿತ್ಜಾಂಕಿಜಿ ಅವರ ಸವಾಲು ಮೀರಿದ ಸುಷ್ಮಾ ಮತ್ತೊಂದು ಚಿನ್ನ ಸೇರಿಸಿದರು.

ನೊರೆಮ್‌ ಚಾನು ಅವರು ಕಜಕಸ್ತಾನಇನ್ನೊಬ್ಬ ಬಾಕ್ಸರ್‌ ಅನೆಲ್‌ ಬಾರ್ಕಿಯಾಹ್‌ ಎದುರು ಜಯದ ನಗೆ ಬೀರಿದರು.

ವಿಂಕಾ ಅವರು ಚೀನಾದ ಹೈನಿ ನುಲಾತಾಯ್ಸಲಿ ವಿರುದ್ಧ, ಸನಮಚಾ ಚಾನು ಅವರು ಉಜ್ಬೆಕಿಸ್ತಾನದ ನವಬಾಕೊರ್‌ ಖಮಿಡೊವಾ ಎದುರು ಗೆದ್ದು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT