ಆತಿಥೇಯರಿಗೆ ಮಣಿದ ಭಾರತ ಮಹಿಳೆಯರು

7

ಆತಿಥೇಯರಿಗೆ ಮಣಿದ ಭಾರತ ಮಹಿಳೆಯರು

Published:
Updated:

ಬ್ಯೂನಸ್‌ ಐರಿಸ್‌: ಭಾರತ ತಂಡ ಯೂತ್‌ ಒಲಿಂಪಿಕ್ಸ್‌ನ ಮಹಿಳೆಯರ 5–ಎ ಸೈಡ್ ಹಾಕಿ ಟೂರ್ನಿಯಲ್ಲಿ ಅರ್ಜೆಂಟೀನಾಗೆ ಮಣಿಯಿತು. ಸತತ ಮೂರು ಪಂದ್ಯಗಳನ್ನು ಗೆದ್ದು ಸಂಭ್ರಮಿಸಿದ್ದ ತಂಡಕ್ಕೆ ಬುಧವಾರ ರಾತ್ರಿ ಆತಿಥೇಯರ ಎದುರು ಪ್ರಭಾವಿ ಆಟ ಆಡಲು ಆಗಲಿಲ್ಲ. ಹೀಗಾಗಿ 2–5ರಿಂದ ಸೋತರು. 

ಏಳನೇ ನಿಮಿಷದಲ್ಲಿ ಸೆಲಿನಾ ಡಿ ಸ್ಯಾಂಟೊ ಅವರ ಮೂಲಕ ಮೊದಲ ಗೋಲು ಗಳಿಸಿ ಅರ್ಜೆಂಟೀನಾ ಮೇಲುಗೈ ಸಾಧಿಸಿತು. ಆದರೆ ಎಂಟನೇ ನಿಮಿಷದಲ್ಲಿ ಮುಮ್ತಾಜ್ ಖಾನ್ ಅವರ ಗೋಲಿನ ಮೂಲಕ ಭಾರತ ತಿರುಗೇಟು ನೀಡಿತು. 10ನೇ ನಿಮಿಷದಲ್ಲಿ ಸೋಫಿಯಾ ರಮಾಲೊ ಚೆಂಡನ್ನು ಗುರಿ ಮುಟ್ಟಿಸಿ ಅರ್ಜೆಂಟೀನಾಗೆ ಮತ್ತೆ ಮುನ್ನಡೆ ತಂದುಕೊಟ್ಟರು. ಮೊದಲಾರ್ಧದ ಮುಕ್ತಾಯಕ್ಕೆ ಕೆಲವೇ ನಿಮಿಷ ಬಾಕಿ ಇರುವಾಗ ರೀತ್‌ ಗೋಲು ಗಳಿಸಿದರು. ಹೀಗಾಗಿ ಭಾರತ 2–2ರ ಸಮಬಲ ಸಾಧಿಸಿ ಸಮಾಧಾನಪಟ್ಟುಕೊಂಡಿತು.

ಅರ್ಜೆಂಟೀನಾ ಪಾರುಪತ್ಯ: ದ್ವಿತೀಯಾರ್ಧದಲ್ಲಿ ಅರ್ಜೆಂಟೀನಾ ತಂಡದವರು ಪಾರುಪತ್ಯ ಮೆರೆದರು. ಪ್ರಬಲ ದಾಳಿ ನಡೆಸಿದ ತಂಡ ಸತತ ಮೂರು ಗೋಲುಗಳನ್ನು ಬಾರಿಸಿ ಪಂದ್ಯ ಗೆದ್ದರು. 12ನೇ ನಿಮಿಷದಲ್ಲಿ ಸೋಫಿಯಾ ಮುನ್ನಡೆ ಗಳಿಸಿಕೊಟ್ಟರೆ 17ನೇ ನಿಮಿಷದಲ್ಲಿ ಜೋಸೆಫಿನಾ ಮತ್ತು 19ನೇ ನಿಮಿಷದಲ್ಲಿ ಜಿನೆಲಾ ಪ್ಯಾಲೆಟ್‌ ಜಯದ ಅಂತರವನ್ನು ಹೆಚ್ಚಿಸಿದರು. ಭಾರತ ತಂಡ ಮುಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !