ಹಾಕಿ: ಐರ್ಲೆಂಡ್‌ಗೆ ಆಘಾತ ನೀಡಿದ ಭಾರತ

7

ಹಾಕಿ: ಐರ್ಲೆಂಡ್‌ಗೆ ಆಘಾತ ನೀಡಿದ ಭಾರತ

Published:
Updated:

ಮರ್ಸಿಯಾ, ಸ್ಪೇನ್‌: ಭಾರತದ ಮಹಿಳಾ ಹಾಕಿ ತಂಡದವರು ಭಾನುವಾರ ಸ್ಮರಣೀಯ ಗೆಲುವು ದಾಖಲಿಸಿದ್ದಾರೆ.

ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ಭಾರತ 3–0 ಗೋಲುಗಳಿಂದ ಐರ್ಲೆಂಡ್‌ ತಂಡಕ್ಕೆ ಆಘಾತ ನೀಡಿದೆ. ಐರ್ಲೆಂಡ್‌ ತಂಡ ವಿಶ್ವಕಪ್‌ನಲ್ಲಿ ಬೆಳ್ಳಿಯ ಪದಕ ಗೆದ್ದ ಸಾಧನೆ ಮಾಡಿತ್ತು.

ಭಾರತದ ನವಜ್ಯೋತ್‌ ಕೌರ್‌ 13ನೇ ನಿಮಿಷದಲ್ಲಿ ಖಾತೆ ತೆರೆದರು. 26ನೇ ನಿಮಿಷದಲ್ಲಿ ರೀನಾ ಖೋಕರ್‌ ಗೋಲು ಹೊಡೆದು ತಂಡ 2–0 ಮುನ್ನಡೆ ಪಡೆಯಲು ನೆರವಾದರು.

ಅಂತಿಮ ಕ್ವಾರ್ಟರ್‌ನಲ್ಲಿ ಸಿಕ್ಕ ‘ಪೆನಾಲ್ಟಿ ಕಾರ್ನರ್‌’ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಗುರ್ಜಿತ್‌ ಕೌರ್‌ ತಂಡದ ಸಂಭ್ರಮ ಇಮ್ಮಡಿಸುವಂತೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !