ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್: ಐಎನ್‌ಬಿಎಲ್‌ಗೆ ಇಂದು ಚಾಲನೆ

Last Updated 17 ಮಾರ್ಚ್ 2022, 22:22 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ಬ್ಯಾಸ್ಕೆಟ್‌ಬಾಲ್ ಫೆಡರೇಷನ್ ಆಯೋಜಿಸಿರುವ 3x3 ರಾಷ್ಟ್ರೀಯ ಲೀಗ್‌ನ ಮೊದಲ ಆವೃತ್ತಿ ಶುಕ್ರವಾರದಿಂದ ನಡೆಯಲಿದೆ. ಮೇ 29ರ ವರೆಗೆ ಪಂದ್ಯಗಳು ನಡೆಯಲಿವೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಫೆಡರೇಷನ್ ಅಧ್ಯಕ್ಷ ಕೆ.ಗೋವಿಂದರಾಜು ತಿಳಿಸಿದರು.

ದೇಶದ 20 ನಗರಗಳಲ್ಲಿ ಏಕಕಾಲದಲ್ಲಿ ಪಂದ್ಯಗಳು ನಡೆಯಲಿದ್ದು ಪುರುಷರು, ಮಹಿಳೆಯರು, 18 ವರ್ಷದೊಳಗಿನ ಪುರುಷರು ಮತ್ತು ಮಹಿಳೆಯರ ವಿಭಾಗಗಳಲ್ಲಿ ಪೈಪೋಟಿ ನಡೆಯಲಿದೆ. ಬೆಂಗಳೂರು, ಐಜ್ವಾಲ್, ಭಾವ್‌ನಗರ್‌, ಭಿಲಾಯ್‌, ಚಂಡೀಗಢ, ಚೆನ್ನೈ, ಕಟಕ್, ದೆಹಲಿ, ಗುವಾಹಟಿ, ಹೈದರಾಬಾದ್, ಇಂದೋರ್, ಜೈಪುರ, ಕಂಗ್ರಾ, ಕೊಚ್ಚಿ, ಕೋಲ್ಕತ್ತ, ಲುಧಿಯಾನ, ಲಖನೌ, ಮುಂಬೈ, ಪಂಜಿಮ್ ಮತ್ತು ಪುದುಚೇರಿ ನಗರಗಳು ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.

ಈ ನಗರಗಳಲ್ಲಿ ನಡೆಯುವ ಲೀಗ್ ಪಂದ್ಯಗಳಲ್ಲಿ ಅಗ್ರ ಸ್ಥಾನ ಗಳಿಸುವ ತಂಡಗಳು ಬೆಂಗಳೂರಿನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯಗಳು ಮೇ 27ರಿಂದ 29ರ ವರೆಗೆ ನಡೆಯಲಿವೆ ಎಂದು ಗೋವಿಂದರಾಜ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT