ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಜುನ ಗೌರವ: ಅಮಿತ್‌, ಗೌರವ್ ಹೆಸರು ಶಿಫಾರಸು

ಹೆಸರು ಸೂಚಿಸಿದ ಬಾಕ್ಸಿಂಗ್ ಫೆಡರೇಷನ್‌
Last Updated 30 ಏಪ್ರಿಲ್ 2019, 17:14 IST
ಅಕ್ಷರ ಗಾತ್ರ

ನವದೆಹಲಿ: ಅರ್ಜುನ ಪ್ರಶಸ್ತಿಗೆ ಅಮಿತ್‌ ಪಂಘಾಲ್ ಮತ್ತು ಗೌರವ್ ಬಿಧುರಿ ಹೆಸರನ್ನುಭಾರತದಬಾಕ್ಸಿಂಗ್ ಫೆಡರೇಷನ್‌ (ಬಿಎಫ್‌ಐ) ಶಿಫಾರಸು ಮಾಡಿದೆ.

ಮಂಗಳವಾರ ನಡೆದ ಫೆಡರೇಷನ್‌ನ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಅಮಿತ್‌ ಪಂಘಾಲ್‌ ಜಕಾರ್ತದಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನಲ್ಲಿ ಉಜ್ಬೇಕಿಸ್ತಾನದವಿಶ್ವಚಾಂಪಿಯನ್‌ ಹಸನ್‌ಬಾಯ್‌ ದುಸ್ಮಾತೋವ್‌ ಅವರನ್ನು ಸೋಲಿಸಿ ಚಿನ್ನಕ್ಕೆ ಕೊರಳೊಡ್ಡಿದ್ದರು. ಅಲ್ಲದೆ, ಇತ್ತೀಚೆಗೆ ನಡೆದ ಏಷ್ಯನ್‌ ಚಾಂಪಿಯನ್‌ಷಿಪ್‌ನ 52 ಕೆ.ಜಿ ವಿಭಾಗದಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ್ದರು. ಇನ್ನೊಬ್ಬ ಬಾಕ್ಸರ್ಗೌರವ್ ಬಿಧುರಿ2017ರಲ್ಲಿ ಹ್ಯಾಂಬರ್ಗ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.

ಎರಡು ವರ್ಷಗಳಲ್ಲಿ ಪಂಘಾಲ್‌ ಮತ್ತು ಬಿಧುರಿ ಗಮನಾರ್ಹಪ್ರದರ್ಶನವನ್ನು ನೀಡಿದ್ದು, ಅರ್ಜುನ ಪ್ರಶಸ್ತಿಗೆ ಸೂಕ್ತರಾಗಿದ್ದಾರೆಎಂದು ಫೆಡರೇಷನ್‌ ಪ್ರಕಟಣೆಯಲ್ಲಿ ತಿಳಿಸಿದೆ.

ತಮ್ಮ ವೃತ್ತಿ ಬದುಕಿನಲ್ಲಿ ಏರಿಳಿತ ಕಂಡಿದ್ದಅಮಿತ್‌ ಪಂಘಾಲ್,2012ರಲ್ಲಿ ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಸಿಲುಕಿ ಒಂದು ವರ್ಷ ನಿಷೇಧಕ್ಕೊಳಗಾಗಿದ್ದರು. ಚಿಕನ್‌ ಗುನ್ಯಾದಿಂದ ಬಳಲುತ್ತಿದ್ದಾಗ ಆಕಸ್ಮಿಕವಾಗಿ ಉದ್ದೀಪನಾ ಅಂಶಗಳಿರುವ ಔಷಧವನ್ನುತೆಗೆದುಕೊಂಡಿದ್ದಾಗಿ ಹೇಳಿಕೆ ನೀಡಿದ್ದರು. ಹೀಗಾಗಿ ಆಯ್ಕೆ ಸಮಿತಿಯು ಅವರನ್ನು ಪ್ರಶಸ್ತಿಗೆ ಪರಿಗಣಿಸರಲಿಲ್ಲ. ಇದೀಗ ಅಮಿತ್‌ ಎಲ್ಲವನ್ನು ಮೀರಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಅವರು ‍ಪ್ರಶಸ್ತಿಗೆ ಅರ್ಹರು ಎಂದು ಫೆಡರೇಷನ್‌ ಹೇಳಿದೆ.

ದ್ರೋಣಾಚಾರ್ಯ ಪ್ರಶಸ್ತಿಗೆ ಕೋಚ್‌ಗಳಾದ ಸಂಧ್ಯಾ ಗುರುಂಗ್ ಮತ್ತು ಶಿವ ಸಿಂಗ್‌ ಅವರ ಹೆಸರನ್ನು ಫೆಡರೇಷನ್‌ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT