ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೈನಾ ವಿರುದ್ಧ ಹಾಕಿ ಆಟಗಾರರ ಕಾನೂನು ಸಮರ

ಮನಪ್ರೀತ್ ಸಿಂಗ್ ವಿರುದ್ಧ ತಮ್ಮ ಕೃತಿಯಲ್ಲಿ ಆರೋಪ ಮಾಡಿರುವ ಕೋಚ್
Last Updated 17 ಸೆಪ್ಟೆಂಬರ್ 2022, 20:09 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ಪುರುಷ ಹಾಗೂ ಮಹಿಳಾ ತಂಡಗಳು ತಮ್ಮ ಮಾಜಿ ಕೋಚ್ ಶೊಡ್ ಮರೈನಾ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲು ನಿರ್ಧರಿಸಿವೆ.

ಮರೈನಾ ಅವರು ಬರೆದಿರುವ ‘ವಿಲ್‌ ಪವರ್ – ದ ಇನ್‌ಸೈಡ್ ಸ್ಟೋರಿ ಆಫ್ ಇನ್‌ಕ್ರೆಡಿಬಲ್ ಟರ್ನ್‌ಆರೌಂಡ್‌ ಇನ್ ಇಂಡಿಯನ್ ವುಮೆನ್ಸ್ ಹಾಕಿ’ ಕೃತಿಯಲ್ಲಿ ಅವರು ಹಾಕಿ ತಂಡದ ಮನಪ್ರೀತ್ ಸಿಂಗ್ ಅವರ ವಿರುದ್ಧ ಬರೆದಿರುವ ಆರೋಪದಿಂದಾಗಿ ಭಾರತ ತಂಡಗಳು ಆಕ್ರೋಶಗೊಂಡಿವೆ.

2018ರ ಕಾಮನ್‌ವೆಲ್ತ್ ಕೂಟದ ಪಂದ್ಯದಲ್ಲಿ ಭಾರತ ತಂಡದ ಯುವ ಆಟಗಾರೊಬ್ಬನಿಗೆ ಕಳಪೆ ಆಟವಾಡುವಂತೆ ಮನಪ್ರೀತ್ ಸಿಂಗ್ ಸೂಚಿಸಿದ್ದರಂತೆ. ಇದರಿಂದಾಗಿ ತಮ್ಮ ಮಿತ್ರರಿಗೆ ತಂಡದಲ್ಲಿ ಅವಕಾಶ ನೀಡುವ ಇರಾದೆ ಅವರದ್ದಾಗಿತ್ತು ಎಂದು ಕೃತಿಯಲ್ಲಿ ಮರೈನಾ ಬರೆದಿದ್ದಾರೆ.

ಈ ಕುರಿತು ಜಂಟಿಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಆಟಗಾರರು, ‘ಮರೈನಾ ಅವರದ್ದು ನಂಬಿಕೆದ್ರೋಹದ ನಡೆ ಇದಾಗಿದೆ. ಇದರಿಂದ ನಮಗೆಲ್ಲರಿಗೂ ಅತೀವ ಬೇಸರವಾಗಿದೆ. ನಮ್ಮ ಖಾಸಗಿ ಮಾಹಿತಿಗಳನ್ನು ಅವರು ಬಳಸಿಕೊಂಡಿದ್ದಾರೆ. ಅಲ್ಲದೇ ಸುಳ್ಳು ಮಾಹಿತಿಗಳನ್ನೂ ಪುಸ್ತಕದಲ್ಲಿ ಬರೆದಿದ್ದಾರೆ. ಭಾರತದ ಅಥ್ಲೀಟ್‌ಗಳು ಇವರ ಹುನ್ನಾರಗಳಿಗೆ ಗುರಿಯಾಗುತ್ತಿದ್ದಾರೆ. ಮರೈನಾ ಹಾಗೂ ಪುಸ್ತಕ ಪ್ರಕಾಶನ ಸಂಸ್ಥೆಯಾದ ಹಾರ್ಪರ್ ಕಾಲಿನ್ಸ್‌ ವಿರುದ್ಧ ಕಾನೂನು ಸಮರಕ್ಕೆ ಸಿದ್ಧರಾಗಿದ್ದೇವೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT