ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಒಲಿಂಪಿಕ್‌ ಅರ್ಹತಾ ಟೂರ್ನಿಯಿಂದ ಹಿಂದೆ ಸರಿದ ಭಾರತ ಜೂಡೊ ತಂಡ

Last Updated 7 ಏಪ್ರಿಲ್ 2021, 23:25 IST
ಅಕ್ಷರ ಗಾತ್ರ

ನವದೆಹಲಿ: ಇಬ್ಬರು ಆಟಗಾರರಿಗೆ ಕೋವಿಡ್‌–19 ದೃಢಪಟ್ಟ ಹಿನ್ನೆಲೆಯಲ್ಲಿ ಭಾರತ ಜೂಡೊ ತಂಡವು ಏಷ್ಯಾ ಓಷೇನಿಯಾ ಒಲಿಂಪಿಕ್ಸ್ ಅರ್ಹತಾ ಟೂರ್ನಿಯಿಂದ ಹಿಂದೆ ಸರಿದಿದೆ. ಕಿರ್ಗಿಸ್ತಾನ ಬಿಷ್‌ಕೆಕ್‌ನಲ್ಲಿ ಟೂರ್ನಿಯು ಆರಂಭವಾಗಬೇಕಿದ್ದ ಒಂದು ದಿನದ ಮೊದಲು ಭಾರತದ ಅಜಯ್ ಯಾದವ್‌ ಹಾಗೂ ರಿತು ಅವರಲ್ಲಿ ಸೋಂಕು ಖಚಿತಪಟ್ಟಿದೆ.

ಸದ್ಯ ಕಿರ್ಗಿಸ್ತಾನದಲ್ಲಿರುವ ಯಾದವ್ 73 ಕೆಜಿ ಕ್ಲಾಸ್‌ ಹಾಗೂ ರಿತು 52 ಕೆಜಿ ವಿಭಾಗದಲ್ಲಿ ಸ್ಪರ್ಧಿಸಬೇಕಿತ್ತು. ಇಬ್ಬರಲ್ಲಿಯೂ ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಭಾರತ ತಂಡವೊಂದರ ಒಲಿಂಪಿಕ್ಸ್ ಅಭಿಯಾನಕ್ಕೆ ತಡೆಯಾದದ್ದು ಇದೇ ಮೊದಲ ಸಲವಾಗಿದೆ.

ಭಾರತ ತಂಡದಲ್ಲಿ 15 ಆಟಗಾರರು ಹಾಗೂ ನಾಲ್ವರು ಕೋಚ್‌ಗಳಿದ್ದಾರೆ. ಮೊದಲ ಬಾರಿ ಪರೀಕ್ಷೆ ನಡೆಸಿದಾಗ ಯಾರಲ್ಲಿಯೂ ಸೋಂಕು ಪತ್ತೆಯಾಗಿರಲಿಲ್ಲ. ಏಪ್ರಿಲ್ ಐದರಂದು ಎರಡನೇ ಬಾರಿಯ ಪರೀಕ್ಷೆಯಲ್ಲಿ ಇಬ್ಬರಲ್ಲಿ ಕೋವಿಡ್‌ ಕಂಡುಬಂದಿದೆ. ಸದ್ಯ ಅವರೆಲ್ಲರೂ ಬಿಷ್‌ಕೇಕ್‌ನ ಹೊಟೇಲೊಂದರಲ್ಲಿ ಕ್ವಾರಂಟೈನ್ ಆಗಿದ್ದಾರೆ.

ಏಷ್ಯಾ ಓಷೇನಿಯಾ ಚಾಂಪಿಯನ್‌ಷಿಪ್‌ ಮಂಗಳವಾರ ಆರಂಭವಾಗಿದ್ದು, ಶನಿವಾರ ಮುಕ್ತಾಯವಾಗಲಿದೆ.

‘ಆಟಗಾರರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರುವ ಕುರಿತು ಕ್ರೀಡಾ ಸಚಿವಾಲಯವು ವಿದೇಶಾಂಗ ಸಚಿವಾಲಯದೊಂದಿಗೆ ಸಮಾಲೋಚನೆ ನಡೆಸಿದೆ‘ ಎಂದು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT