ವಿಶ್ವ ಶೂಟಿಂಗ್ ಚಾಂಪಿಯನ್‌ಷಿಪ್‌: ವಿಜಯವೀರ್‌ಗೆ ‘ಡಬಲ್‌’ ಚಿನ್ನದ ಸಂಭ್ರಮ

7
ಜೂನಿಯರ್‌ ವಿಭಾಗದಲ್ಲಿ ಮನಗೆದ್ದ ಸಹೋದರರು

ವಿಶ್ವ ಶೂಟಿಂಗ್ ಚಾಂಪಿಯನ್‌ಷಿಪ್‌: ವಿಜಯವೀರ್‌ಗೆ ‘ಡಬಲ್‌’ ಚಿನ್ನದ ಸಂಭ್ರಮ

Published:
Updated:
Deccan Herald

 ಚಾಂಗ್ವಾನ್‌, ದಕ್ಷಿಣ ಕೊರಿಯಾ: ಭಾರತದ ಜೂನಿಯರ್‌ ಶೂಟರ್‌ಗಳು ಇಲ್ಲಿ ಶುಕ್ರವಾರ ಮುಕ್ತಾಯಗೊಂಡ ಐಎಸ್‌ಎಸ್‌ಎಫ್‌ ವಿಶ್ವ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪಾರಮ್ಯ ಮೆರೆದರು. 16 ವರ್ಷದ ವಿಜಯವೀರ್‌ ಸಿಧು ಅವರು ಕೊನೆಯ ದಿನ ವೈಯಕ್ತಿಕ ಮತ್ತು ತಂಡ ವಿಭಾಗದಲ್ಲಿ ಚಿನ್ನ ಗೆದ್ದು ಗಮನ ಸೆಳೆದರು.

ಜೂನಿಯರ್‌ ವಿಭಾಗದಲ್ಲಿ ಭಾರತ 11 ಚಿನ್ನ ಸೇರಿದಂತೆ ಒಟ್ಟು 27 ಪದಕಗಳನ್ನು ಬಗಲಿಗೆ ಹಾಕಿಕೊಂಡಿದ್ದು ಮೂರನೇ ಸ್ಥಾನ ಗಳಿಸಿದೆ. ಇದು ಭಾರತದ ಈ ವರೆಗಿನ ಶ್ರೇಷ್ಠ ಸಾಧನೆಯಾಗಿದೆ.

ಗುರುವಾರ ನಡೆದ 25 ಮೀಟರ್‌ ಪಿಸ್ತೂಲು ವಿಭಾಗದಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದ ವಿಜಯವೀರ್ ಸಿಧು ಶುಕ್ರವಾರ ಚಿನ್ನ ಗೆದ್ದರು. ಆತಿಥೇಯ ದೇಶದ ಲೀ ಗುನ್ಯೆಕ್‌ ಬೆಳ್ಳಿ ಗೆದ್ದರೆ ಚೀನಾದ ಹಾವೊಜಿ ಜು ಅವರು ಕಂಚು ಗಳಿಸಿದರು.

ತಂಡ ವಿಭಾಗದಲ್ಲಿ ಸಹೋದರ ಉದಯವೀರ್‌ ಮತ್ತು ರಾಜ್‌ಕನ್ವರ್ ಸಿಂಗ್ ಸಂಧು ಅವರ ಜೊತೆಗೂಡಿ ವಿಜಯವೀರ್‌ ಚಿನ್ನ ಗೆದ್ದರು. ಈ ವಿಭಾಗದಲ್ಲೂ ದಕ್ಷಿಣ ಕೊರಿಯಾ ಬೆಳ್ಳಿ ಗಳಿಸಿತು. ಚೆಕ್ ಗಣರಾಜ್ಯದ ತಂಡ ಕಂಚು ಗೆದ್ದಿತು.

ಸೀನಿಯರ್‌ ವಿಭಾಗದಲ್ಲಿ ಗುರುಪ್ರೀತ್ ಸಿಂಗ್ ಶುಕ್ರವಾರ ಬೆಳ್ಳಿ ಗೆದ್ದರು. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದ ಅವರಿಗೆ ಇಲ್ಲಿ ಉಕ್ರೇನ್‌ನ ಪಾವ್ಲೊ ಕೊರೊಸ್ಟಿಲೊವ್ ಅವರ ಸವಾಲನ್ನು ಮೀರಲು ಆಗಲಿಲ್ಲ. ದಕ್ಷಿಣ ಕೊರಿಯಾದ ಕಿಮ್ ಜುನ್‌ಹಾಂಗ್‌ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಗುರುಪ್ರೀತ್‌, ಅಮನ್‌ಪ್ರೀತ್‌ ಸಿಂಗ್ ಮತ್ತು ವಿಜಯ್‌ ಕುಮಾರ್ ಅವರನ್ನು ಒಳಗೊಂಡ ಸೀನಿಯರ್‌ ತಂಡ ಒಟ್ಟು 1699 ಪಾಯಿಂಟ್‌ಗಳೊಂದಿಗೆ ನಾಲ್ಕನೇ ಸ್ಥಾನ ಗಳಿಸಿತು. ಜೂನಿಯರ್ ಮಹಿಳೆಯರ ಸ್ಕೀಟ್ ತಂಡ ನಾಲ್ಕನೇ ಸ್ಥಾನ ಗಳಿಸಿದರೆ ಪುರುಷರ ತಂಡ 20ನೇ ಸ್ಥಾನಕ್ಕೆ ಕುಸಿಯಿತು.

***

ವಿಜಯವೀರ್‌ ಸಿಧು: ಚಿನ್ನ 
ಸ್ಕೋರು: 572 ಪ್ರತಿಸ್ಪರ್ಧಿ ಸ್ಕೋರು: 570

25 ಮೀಟರ್‌ ಪಿಸ್ತೂಲು, ತಂಡ ವಿಭಾಗ

ವಿಜಯವೀರ್‌ ಸಿಧು, ಉದಯವೀರ್‌ ಸಿಧು, ರಾಜ್‌ಕನ್ವರ್ ಸಿಂಗ್ ಸಂಧು: ಚಿನ್ನ

ಸ್ಕೋರು: 1695

25 ಮೀಟರ್‌ ಸೆಂಟರ್ ಫೈರ್‌ ಪಿಸ್ತೂಲು, ಸೀನಿಯರ್ ವಿಭಾಗ

ಗುರುಪ್ರೀತ್‌ ಸಿಂಗ್‌: ಬೆಳ್ಳಿ

ಸ್ಕೋರು: 579

ಪ್ರತಿಸ್ಪರ್ಧಿ ಸ್ಕೋರು: 581

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !