ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಬಾಲ ಪ್ರತಿಭೆಗಳಿಗೆ ಚಿನ್ನ

Last Updated 16 ನವೆಂಬರ್ 2018, 17:02 IST
ಅಕ್ಷರ ಗಾತ್ರ

ನವದೆಹಲಿ: ಬಾಲ ಪ್ರತಿಭೆಗಳಾದ ಗುಕೇಶ್‌ ಡಿ ಮತ್ತು ಸವಿತಶ್ರೀ ಬಿ, ಸ್ಪೇನ್‌ನಲ್ಲಿ ನಡೆದ ವಿಶ್ವ ಕೆಡೆಟ್‌ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಅವರು ಕ್ರಮವಾಗಿ 12 ವರ್ಷದೊಳಗಿನವರ ಮುಕ್ತ ಮತ್ತು ಬಾಲಕಿಯರ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.

ಎಂಟು, 10 ಮತ್ತು 12 ವರ್ಷದೊಳಗಿನವರ ವಿಭಾಗಗಳಲ್ಲಿ ಚಾಂಪಿಯನ್‌ಷಿಪ್‌ ನಡೆದಿತ್ತು. 86 ಫೆಡರೇಷನ್‌ಗಳಿಂದ ಒಟ್ಟು 851 ಮಂದಿ ಪಾಲ್ಗೊಂಡಿದ್ದ ಸ್ಪರ್ಧೆಯಲ್ಲಿ ಭಾರತದ ಚೆಸ್ ಪಟುಗಳ ಸಾಧನೆ ಮೂಡಿ ಬಂದಿದೆ. ಮುಕ್ತ ವಿಭಾಗದಲ್ಲಿ 542 ಮತ್ತು ಬಾಲಕಿಯರ ವಿಭಾಗದಲ್ಲಿ 309 ಮಂದಿ ಪಾಲ್ಗೊಂಡಿದ್ದರು.

10 ಜಯ ಮತ್ತು ಒಂದು ಸೋಲಿನೊಂದಿಗೆ ಗುಕೇಶ್‌ 1.5 ಪಾಯಿಂಟ್ ಗಳಿಸಿ ಗಮನ ಸೆಳೆದಿದ್ದರು. ರಷ್ಯಾದ ಮುರ್ಜಿನ್‌ ವೊಲೊಡೊರ್‌ ಮತ್ತು ಅಮೆರಿಕದ ಚಾಸಿನ್‌ ನಿಕೊ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಗಳಿಸಿದರು.

ಅಂತಿಮ ಸುತ್ತಿನಲ್ಲಿ ಫ್ರಾನ್ಸ್‌ನ ರಜಫಿಂಡ್ರಸ್ಟಿವಾ ತಿಮೋತಿ ಅವರನ್ನು ಗುಕೇಶ್ ಮಣಿಸಿದರು. ಅಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಅವರು 54 ನಡೆಗಳಲ್ಲಿ ಗೆಲುವು ತಮ್ಮದಾಗಿಸಿಕೊಂಡರು.

ಸವಿತಾ
ಸವಿತಾ

ಸವಿತಾಗೆ ಸುಲಭ ಗೆಲುವು: ತಮಿಳುನಾಡಿನ ಸವಿತಾ, ಎಂಟು ಸುತ್ತುಗಳಲ್ಲಿ ನಿರಾಯಾಸವಾಗಿ ಗೆದ್ದರು. ಎರಡು ಸುತ್ತುಗಳಲ್ಲಿ ಡ್ರಾ ಸಾಧಿಸಿದ್ದರು. ಫೈನಲ್‌ ಸುತ್ತನ್ನು ಅವರು 38 ನಡೆಗಳಲ್ಲಿ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. ಉಜ್ಬೆಕಿಸ್ತಾನದ ಒಮೊನೊವಾ ಉಮೈದಾ ದ್ವಿತೀಯ ಸ್ಥಾನ ಗಳಿಸಿದರು. ಭಾರತವು ಚಾಂಪಿಯನ್‌ಷಿಪ್‌ನಲ್ಲಿ ರನ್ನರ್ ಅಪ್‌ ಆಯಿತು. ಎರಡು ಚಿನ್ನ ಮತ್ತು ಒಂದು ಕಂಚಿನ ಪದಕ ಗೆದ್ದ ಚೀನಾ ಚಾಂಪಿಯನ್ ಆದರೆ, ಏಕೈಕ ಚಿನ್ನ ಗೆದ್ದ ಅಮೆರಿಕ ಮೂರನೇ ಸ್ಥಾನ ಗಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT