ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ ಶೂಟಿಂಗ್‌: ಭಾರತಕ್ಕೆ ಮೂರನೇ ಚಿನ್ನ, ಪದಕ ಪಟ್ಟಿಯಲ್ಲಿ ಅಗ್ರಸ್ಥಾನ

ವಿಶ್ವಕಪ್‌ ಶೂಟಿಂಗ್‌: ಪದಕ ಪಟ್ಟಿಯಲ್ಲಿ ಅಗ್ರಸ್ಥಾನ
Last Updated 14 ಜುಲೈ 2022, 16:22 IST
ಅಕ್ಷರ ಗಾತ್ರ

ಚಾಂಗ್ವಾನ್‌, ದಕ್ಷಿಣ ಕೊರಿಯ:ಭಾರತದ ಶೂಟರ್‌ಗಳು ಇಲ್ಲಿ ನಡೆಯುತ್ತಿರುವ ಐಎಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌ನಲ್ಲಿ ಮತ್ತೊಂದು ಚಿನ್ನ ಹಾಗೂ ಮೂರು ಬೆಳ್ಳಿಯ ಪದಕ ಜಯಿಸಿದರು.

ಅರ್ಜುನ್‌ ಬಬೂತಾ, ತುಷಾರ್‌ ಮಾನೆ ಮತ್ತು ಪಾರ್ಥ್‌ ಮಖಿಜಾ ಅವರು ಗುರುವಾರ ನಡೆದ ಪುರುಷರ 10 ಮೀ ಏರ್‌ ರೈಫಲ್‌ ತಂಡ ವಿಭಾಗದಲ್ಲಿ ಅಗ್ರಸ್ಥಾನ ಗಳಿಸಿದರು.

ಚಿನ್ನದ ಪದಕಕ್ಕಾಗಿ ನಡೆದ ಪೈಪೋಟಿಯಲ್ಲಿ ಭಾರತ 17–15 ರಲ್ಲಿ ಕೊರಿಯಾ ತಂಡವನ್ನು ಮಣಿಸಿತು. ಕೊರಿಯಾದ ಸೆಯುಂಗೊ ಬಾಂಗ್, ಸಂಗ್ಡೊ ಕಿಮ್‌ ಮತ್ತು ಹಾಜುನ್‌ ಪಾರ್ಕ್‌ ಪ್ರಬಲ ಪೈಪೋಟಿ ಒಡ್ಡಿದರೂ, ಭಾರತದ ಸ್ಪರ್ಧಿಗಳು ಚಿನ್ನಕ್ಕೆ ಗುರಿಯಿಟ್ಟರು.

ಮಹಿಳೆಯರಿಗೆ ಬೆಳ್ಳಿ: 10 ಮೀ. ಏರ್‌ ರೈಫಲ್‌ ಮಹಿಳೆಯರ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಲಭಿಸಿತು. ಇಳವೆನಿಲ್ ವಲರಿವನ್, ಮೆಹುಲಿ ಘೋಷ್‌ ಮತ್ತು ರಮಿತಾ ಅವರನ್ನೊಳಗೊಂಡ ಭಾರತ ತಂಡ 10–16 ರಲ್ಲಿ ಆತಿಥೇಯ ದೇಶದ ಜಿಯೊನ್‌ ಕುಮ್, ಯುನ್‌ಸಿಯೊ ಲೀ ಮತ್ತು ದಾಯೆಯೊಂಗ್ ಗೊನ್‌ ಎದುರು ಪರಾಭವಗೊಂಡಿತು.

ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಬೆಳ್ಳಿ: 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಭಾರತದ ಪುರುಷರ ಮತ್ತು ಮಹಿಳೆಯರ ತಂಡಗಳು ಬೆಳ್ಳಿಯ ಪದಕ ಗೆದ್ದುಕೊಂಡವು.

ಚಿನ್ನದ ಪದಕಕ್ಕಾಗಿ ನಡೆದ ಪೈಪೋಟಿಯಲ್ಲಿ ಪುರುಷರ ತಂಡ 15–17 ರಲ್ಲಿ ಇಟಲಿ ಎದುರು ಸೋತಿತು. ರಿಧಿಮಾ ಸಂಗ್ವಾನ್, ಯುವಿಕಾ ತೋಮರ್‌ ಮತ್ತು ಪಲಕ್ ಅವರನ್ನೊಳಗೊಂಡ ಮಹಿಳಾ ತಂಡ 2–10 ರಲ್ಲಿ ಕೊರಿಯಾ ಎದುರು ಪರಾಭವಗೊಂಡಿತು.

ಮೂರು ಚಿನ್ನ, ನಾಲ್ಕು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಜಯಿಸಿರುವ ಭಾರತ, ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ದಕ್ಷಿಣ ಕೊರಿಯ ಮತ್ತು ಸರ್ಬಿಯ ಬಳಿಕದ ಸ್ಥಾನಗಳಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT