ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಐಎಚ್‌ ರ‍್ಯಾಂಕಿಂಗ್‌: ನಾಲ್ಕನೇ ಸ್ಥಾನದಲ್ಲಿ ಭಾರತ ತಂಡ

ಎಫ್‌ಐಎಚ್‌ ರ‍್ಯಾಂಕಿಂಗ್‌: ಮಹಿಳಾ ತಂಡಕ್ಕೆ 9ನೇ ಸ್ಥಾನ
Last Updated 21 ಡಿಸೆಂಬರ್ 2020, 12:32 IST
ಅಕ್ಷರ ಗಾತ್ರ

ಲೂಸನ್‌, ಸ್ವಿಟ್ಜರ್ಲೆಂಡ್‌: ಭಾರತದ ಪುರುಷ ಹಾಗೂ ಮಹಿಳಾ ಹಾಕಿ ತಂಡಗಳು 2020ರ ವರ್ಷವನ್ನು, ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ (ಎಫ್‌ಐಎಚ್‌) ರ‍್ಯಾಂಕಿಂಗ್‌ನಲ್ಲಿ ಕ್ರಮವಾಗಿ ನಾಲ್ಕು ಮತ್ತು 9ನೇ ಸ್ಥಾನಗಳೊಂದಿಗೆ ಕೊನೆಗೊಳಿಸಿವೆ. ಈ ಋತುವಿನ ಬಹುತೇಕ ಆಟಕ್ಕೆ ಕೋವಿಡ್‌–19 ಪಿಡುಗು ಅಡ್ಡಿ ಉಂಟುಮಾಡಿತ್ತು.

ಬೆಲ್ಜಿಯಂನ ಪುರುಷರ ತಂಡ ಹಾಗೂ ನೆದರ್ಲೆಂಡ್ಸ್‌ನ ಮಹಿಳಾ ತಂಡಗಳು ಮೊದಲ ಸ್ಥಾನದಲ್ಲಿವೆ ಎಂದು ಎಫ್‌ಐಎಚ್‌ ಸೋಮವಾರ ತಿಳಿಸಿದೆ.

ವಿಶ್ವ ರ‍್ಯಾಂಕಿಂಗ್‌ಗಳ ಲೆಕ್ಕಾಚಾರಕ್ಕಾಗಿ ಎಫ್‌ಐಎಚ್‌,ಈ ವರ್ಷದ ಜನೆವರಿಯಲ್ಲಿ ಪಂದ್ಯ ಆಧಾರಿತ ಹೊಸ ಮಾದರಿಯನ್ನು ಪರಿಚಯಿಸಿತ್ತು. ವರ್ಷದ ಆರಂಭದಲ್ಲಿ ಎಫ್‌ಐಎಚ್‌ ಪ್ರೊ ಲೀಗ್ ಪಂದ್ಯಗಳನ್ನು ಆಡಿಸಲಾಗಿತ್ತು. ಆ ಮಾರ್ಚ್‌ನಿಂದ ಕೋವಿಡ್‌ ಹಿನ್ನೆಲೆಯಲ್ಲಿ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿದ್ದವು.

ಪುರುಷರ ವಿಭಾಗದ ರ‍್ಯಾಂಕಿಂಗ್‌ನಲ್ಲಿ, ವಿಶ್ವ ಹಾಗೂ ಯೂರೋಪಿಯನ್ ಚಾಂಪಿಯನ್‌ ಬೆಲ್ಜಿಯಂ ತಂಡವು 2496.88 ಪಾಯಿಂಟ್ಸ್ ಕಲೆಹಾಕಿದ್ದು ಅಗ್ರಸ್ಥಾನದಲ್ಲಿದೆ. 2019ರ ಎಫ್‌ಐಎಚ್‌ ಹಾಕಿ ಪ್ರೊ ಲೀಗ್ ವಿಜೇತ ಆಸ್ಟ್ರೇಲಿಯಾ (2385.70) ಎರಡನೇ ಹಾಗೂ ನೆದರ್ಲೆಂಡ್ಸ್ (2257.96) ಮೂರನೇ ಸ್ಥಾನದಲ್ಲಿದೆ. ನಾಲ್ಕನೇ ಸ್ಥಾನದಲ್ಲಿರುವ ಭಾರತದ ಬಳಿ 2063.78 ಪಾಯಿಂಟ್‌ಗಳಿವೆ.

ಮಹಿಳೆಯರ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿರುವ ನೆದರ್ಲೆಂಡ್ಸ್ ಒಟ್ಟು 2631.99 ಪಾಯಿಂಟ್ಸ್ ಕಲೆಹಾಕಿದೆ. ಅರ್ಜೆಂಟೀನಾ (2174.61) ಹಾಗೂ ಜರ್ಮನಿ (2054.2) ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನಗಳಲ್ಲಿವೆ.

ಭಾರತ ಮಹಿಳಾ ತಂಡವು ವರ್ಷಾಂತ್ಯದಲ್ಲಿ 1543 ಪಾಯಿಂಟ್ಸ್ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT