ಐಒಎಗೆ ಗೆಹ್ಲೋಟ್‌, ಅನಿಲ್‌ ಖನ್ನಾ ಆಯ್ಕೆ ಸಾಧ್ಯತೆ

7

ಐಒಎಗೆ ಗೆಹ್ಲೋಟ್‌, ಅನಿಲ್‌ ಖನ್ನಾ ಆಯ್ಕೆ ಸಾಧ್ಯತೆ

Published:
Updated:

ನವದೆಹಲಿ: ಭಾರತ ಒಲಿಂಪಿಕ್‌ ಸಂಸ್ಥೆಯ (ಐಒಎ) ಹಿರಿಯ ಉಪಾಧ್ಯಕ್ಷರಾಗಿ ಅನಿಲ್‌ ಖನ್ನಾ ಹಾಗೂ ಉಪಾಧ್ಯಕ್ಷರಾಗಿ ‌ಜನಾರ್ದನ ಸಿಂಗ್‌ ಗೆಹ್ಲೋಟ್‌ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. 

ಐಒಎ ವಾರ್ಷಿಕ ಸಾಮಾನ್ಯ ಸಭೆ ಇದೇ 22ರಂದು ನಡೆಯಲಿದ್ದು ಅಲ್ಲಿ ಇವರ ಆಯ್ಕೆಯ ವಿವರವನ್ನು ಘೋಷಿಸಲಾಗುವುದು ಎಂದು ತಿಳಿದು ಬಂದಿದೆ.

ಅಖಿಲ ಭಾರತ ಟೆನಿಸ್‌ ಸಂಸ್ಥೆಯ ಅಧ್ಯಕ್ಷರಾಗಿದ್ದ ಅನಿಲ್ ಖನ್ನಾ ಈಗ ಏಷ್ಯಾ ಟೆನಿಸ್‌ ಫೆಡರೇಷನ್‌ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್‌ ಮುಖಂಡರಾಗಿದ್ದ ಗೆಹ್ಲೋಟ್‌ ಈ ಹಿಂದೆ ರಾಜಸ್ಥಾನದಲ್ಲಿ ಸಚಿವರಾಗಿದ್ದರು.

28 ವರ್ಷ ಭಾರತ ಕಬಡ್ಡಿ ಫೆಡರೇಷನ್‌ನ ಅಧ್ಯಕ್ಷರಾಗಿದ್ದ ಗೆಹ್ಲೋಟ್‌ ವಿವಾದ ಸೃಷ್ಟಿಯಾದ ನಂತರ ಪತ್ನಿಯನ್ನು ಆ ಸ್ಥಾನಕ್ಕೆ ಏರಿಸಿದ್ದರು. ನಂತರ, ತಮ್ಮನ್ನು ಫೆಡರೇಷನ್‌ನ ಆಜೀವ ಸದಸ್ಯ ಎಂದು ಘೋಷಿಸಿಕೊಂಡಿದ್ದರು. ಆದರೆ ಈ ವರ್ಷದ ಆರಂಭದಲ್ಲಿ ದೆಹಲಿ ಹೈಕೋರ್ಟ್‌ ಇದನ್ನು ಅಸಿಂಧುಗೊಳಿಸಿತ್ತು. ಪತ್ನಿಯ ಆಯ್ಕೆಯನ್ನೂ ತಡೆಹಿಡಿದಿತ್ತು. ಗೆಹ್ಲೋಟ್‌, ಜೂನ್‌ನಿಂದ ಅಂತರರಾಷ್ಟ್ರೀಯ ಕಬಡ್ಡಿ ಫೆಡರೇಷನ್‌ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಐಒಎ ಚುನಾವಣಾಧಿಕಾರಿಯಾಗಿ ಜಿಲ್ಲಾ ನಿವೃತ್ತ ನ್ಯಾಯಾಧೀಶರಾದ ದೇವೇಂದರ್ ಕುಮಾರ್‌ ನೈಲ್ವಾಲ್‌ ನೇಮಕಗೊಂಡಿದ್ದಾರೆ. ‘ಹಿರಿಯ ಉಪಾಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೇ ನಾಮಪತ್ರಗಳು ಸಲ್ಲಿಕೆಯಾಗಿರುವುದರಿಂದ ಚುನಾವಣೆ ನಡೆಸಲಾಗುವುದಿಲ್ಲ’ ಎಂದು ದೇವೇಂದರ್ ಕುಮಾರ್‌ ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !