ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಭಾರತ ತಂಡ ಜಯಭೇರಿ

ನಾಲ್ಕು ರಾಷ್ಟ್ರಗಳ ಅಂತರರಾಷ್ಟ್ರೀಯ ಮಹಿಳಾ ಕಿರಿಯರ ಹಾಕಿ ಟೂರ್ನಿ
Last Updated 1 ಜೂನ್ 2019, 20:15 IST
ಅಕ್ಷರ ಗಾತ್ರ

ಡಬ್ಲಿನ್‌: ಪೈಪೋಟಿಯಿಂದ ಕೂಡಿದ ಪಂದ್ಯದಲ್ಲಿ ಭಾರತದ ಮಹಿಳಾ ಕಿರಿಯರ ತಂಡವು ಕೆನಡಾ ತಂಡವನ್ನು 2–0 ಗೋಲುಗಳಿಂದ ಮಣಿಸಿದೆ. ನಾಲ್ಕು ರಾಷ್ಟ್ರಗಳ 21 ವಯಸ್ಸಿನೊಳಗಿನವರ ಕ್ಯಾಂಟರ್‌ ಫಿಜ್‌ಗೆರಾಲ್ಡ್‌ ಅಂತರರಾಷ್ಟ್ರೀಯ ಹಾಕಿ ಟೂರ್ನಿಯ ಪಂದ್ಯದಲ್ಲಿ ಭಾರತ ಈ ಗೆಲುವು ದಾಖಲಿಸಿದೆ.

ಭಾರತದ ಪರ ಶರ್ಮಿಳಾ ದೇವಿ ಹಾಗೂ ಮರಿಯಾನ ಕುಜುರ್‌ ಗೋಲುಗಳನ್ನು ಸಿಡಿಸಿ ಮಿಂಚಿದರು.

ಆರಂಭಲ್ಲೇ ಆಕ್ರಮಣಕಾರಿ ಆಟ ಕ್ಕಿಳಿದ ಭಾರತದ ಮಹಿಳೆಯರು, ಕೆನಡಾ ರಕ್ಷಣಾ ವಿಭಾಗದ ಮೇಲೆ ಒತ್ತಡ ಹೆಚ್ಚಿಸಿದರು. ಪ್ರಥಮ ಕ್ವಾರ್ಟರ್‌ ಮಧ್ಯದಲ್ಲಿ ಭಾರತದ ಆಟಗಾರ್ತಿಯ ರಿಗೆ ಪೆನಾಲ್ಟಿ ಸ್ಟ್ರೋಕ್‌ ಅವಕಾಶ ದೊರೆಯಿತು. ಆದರೆ ಗಗನದೀಪ್‌ ಕೈಚೆಲ್ಲಿದರು. ಎರಡನೇ ಕ್ವಾರ್ಟರ್‌ನಲ್ಲಿ ದೊರೆತ ಪೆನಾಲ್ಟಿ ಕಾರ್ನರ್‌ನ್ನು ಈ ಬಾರಿ ಕೆನಡಾ ಹಾಳು ಮಾಡಿಕೊಂಡಿತು.

ಮೂರನೇ ಕ್ವಾರ್ಟರ್‌ನಲ್ಲಿ ಶರ್ಮಿಳಾ ದೇವಿ ಅವರು ಭಾರತದ ಗೋಲಿನ ಖಾತೆ ತೆರೆದರು. ಕೊನೆಯ ಹಂತದಲ್ಲಿ ಕುಜುರ್‌ ಅವರು ಡ್ತ್ಯಾಗ್‌ಫ್ಲಿಕ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ತಂಡದಲ್ಲಿ ಸಂಭ್ರಮದ ಹೊಳೆ ಹರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT