ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣಿ ರಾಂಪಾಲ್ ಸೇರಿ ಹಾಕಿ ತಂಡದ ಏಳು ಆಟಗಾರ್ತಿಯರಿಗೆ ಕೋವಿಡ್‌

Last Updated 26 ಏಪ್ರಿಲ್ 2021, 14:32 IST
ಅಕ್ಷರ ಗಾತ್ರ

ನವದೆಹಲಿ:ಬೆಂಗಳೂರಿನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಕೇಂದ್ರದಲ್ಲಿ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಸೇರಿದಂತೆ ಏಳು ಮಂದಿ ಆಟಗಾರ್ತಿಯರಲ್ಲಿ ಸೋಮವಾರ ಕೋವಿಡ್‌ –19 ದೃಢಪಟ್ಟಿದೆ. ಸೋಂಕಿತರಲ್ಲಿ ಇಬ್ಬರು ನೆರವು ಸಿಬ್ಬಂದಿಯೂ ಸೇರಿದ್ದಾರೆ.

ಆಟಗಾರ್ತಿಯರು ಹಾಗೂ ನೆರವು ಸಿಬ್ಬಂದಿಯಲ್ಲಿ ಸೋಂಕಿನ ಲಕ್ಷಣಗಳು ಇಲ್ಲವಾದರೂ, ಸಾಯ್‌ ಕೇಂದ್ರದಲ್ಲಿ ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ.

‘ತಮ್ಮ ತವರು ರಾಜ್ಯಗಳಿಂದ ಇಲ್ಲಿಗೆ ಬಂದ ಆಟಗಾರ್ತಿಯರನ್ನು, ಕ್ವಾರಂಟೈನ್ ಮಾಡಿದ ಬಳಿಕ ಏಪ್ರಿಲ್ 24ರಂದು ನಿಯಮಗಳ ಅನ್ವಯ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು‘ ಎಂದು ಸಾಯ್‌ ಹೇಳಿಕೆಯಲ್ಲಿ ತಿಳಿಸಿದೆ.

ರಾಣಿ ಅಲ್ಲದೆ ಸವಿತಾ ಪುನಿಯಾ, ಶರ್ಮಿಳಾ ದೇವಿ, ರಜನಿ, ನವಜೋತ್ ಕೌರ್‌, ನವನೀತ್ ಕೌರ್‌ ಹಾಗೂ ಸುಶೀಲಾ ಅವರಿಗೆ ಕೋವಿಡ್ ಖಚಿತಪಟ್ಟಿದೆ. ವಿಡಿಯೊ ಅನಾಲಿಸ್ಟ್‌ ಅಮೃತಾ ಪ್ರಕಾಶ್‌ ಮತ್ತು ವೈಜ್ಞಾನಿಕ ಸಲಹೆಗಾರ್ತಿ ವೇಯ್ನ್‌ ಲೊಂಬಾರ್ಡ್‌ ಕೊರೊನಾ ಸೋಂಕಿತ ನೆರವು ಸಿಬ್ಬಂದಿಯಾಗಿದ್ದಾರೆ.

ಭಾರತ ಮಹಿಳಾ ತಂಡವು ಟೋಕಿಯೊ ಒಲಿಂಪಿಕ್ಸ್ ಸಿದ್ದತೆಗಾಗಿ ಕಳೆದ ಭಾನುವಾರ ಬೆಂಗಳೂರಿಗೆ ಆಗಮಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT