ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಅರ್ಜೆಂಟೀನಾಕ್ಕೆ ಮಣಿದ ಭಾರತದ ಮಹಿಳೆಯರು

Last Updated 29 ಜನವರಿ 2021, 11:07 IST
ಅಕ್ಷರ ಗಾತ್ರ

ಬ್ಯೂನಸ್‌ ಐರಿಸ್‌: ಅರ್ಜೆಂಟೀನಾ ಪ್ರವಾಸದಲ್ಲಿ ಭಾರತ ಮಹಿಳಾ ತಂಡ ಮತ್ತೊಂದು ಸೋಲು ಅನುಭವಿಸಿತು. ಶುಕ್ರವಾರ ನಡೆದ ಎರಡನೇ ಪಂದ್ಯದಲ್ಲಿ ಪ್ರವಾಸಿ ತಂಡದ ಆಟಗಾರ್ತಿಯರು 0–2ರಿಂದ ಅರ್ಜೆಂಟೀನಾ ತಂಡಕ್ಕೆ ಮಣಿದರು.

ವಿಜೇತ ಅರ್ಜೆಂಟೀನಾ ತಂಡದ ಪರ ಸಿಲ್ವಿನಾ ಡೇಲಿಯಾ (2ನೇ ನಿಮಿಷ) ಹಾಗೂ ಅಗಸ್ಟಿನಾ ಆಲ್ಬರ್ಟಾರಿಯೊ (54ನೇ ನಿಮಿಷ) ಗೋಲು ದಾಖಲಿಸಿದರು.

ಮೊದಲ ಪಂದ್ಯದಲ್ಲಿ 2–3ರಿಂದ ಭಾರತ ಪರಾಭವ ಕಂಡಿತ್ತು.

ಮೊದಲ ಕ್ವಾರ್ಟರ್‌ನಲ್ಲಿಆತಿಥೇಯ ತಂಡದ ಆಟಗಾರ್ತಿಯರು ಭಾರತ ತಂಡದ ಮೇಲೆ ಹೆಚ್ಚು ಒತ್ತಡ ಹಾಕಿದರು. ಎರಡನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಕೈಚಳಕ ತೋರಿದ ಸಿಲ್ವಿನಾ, ಅರ್ಜೆಂಟೀನಾ ತಂಡದ ಗೆಲುವಿಗೆ ಮುನ್ನುಡಿ ಬರೆದರು.

ಇದಾದ ಬಳಿಕ ಎಚ್ಚೆತ್ತುಕೊಂಡ ಭಾರತದ ಆಟಗಾರ್ತಿಯರು ಶಿಸ್ತುಬದ್ಧ ಆಟದ ಮೂಲಕ ಅವಕಾಶಗಳನ್ನು ಸೃಷ್ಟಿಸಿಕೊಂಡರು. ಆದರೆ ಅರ್ಜೆಂಟೀನಾದ ‘ರಕ್ಷಣಾ ಗೋಡೆ’ಯನ್ನು ಭೇದಿಸಲಾಗಲಿಲ್ಲ. ಎರಡು ಮತ್ತು ಮೂರನೇ ಕ್ವಾರ್ಟರ್‌ ಗೋಲುರಹಿತವಾಗಿ ಕೊನೆಗೊಂಡವು. ಇದರಿಂದಾಗಿ ನಾಲ್ಕನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತು.

ಈ ಹಂತದಲ್ಲಿ ಮತ್ತೊಂದು ಪೆನಾಲ್ಟಿ ಕಾರ್ನರ್ ಲಾಭ ಪಡೆದ ಅಗಸ್ಟಿನಾ ಗೋಲು ಹೊಡೆದು ತಮ್ಮ ತಂಡದ ಗೆಲುವನ್ನು ಖಚಿತಪಡಿಸಿದರು.

ಉಭಯ ತಂಡಗಳ ನಡುವೆ ಸರಣಿಯ ಮೂರನೇ ಪಂದ್ಯಶನಿವಾರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT