ಶನಿವಾರ, ಏಪ್ರಿಲ್ 17, 2021
27 °C

ಹಾಕಿ: ಚಿಲಿ ತಂಡದೊಂದಿಗೆ ಸಮಬಲ ಸಾಧಿಸಿದ ಭಾರತ ಮಹಿಳಾ ಜೂನಿಯರ್ ತಂಡ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸ್ಯಾಂಟಿಯಾಗೊ: ಹಿನ್ನಡೆಯಿಂದ ಪುಟಿದೆದ್ದ ಭಾರತ ಮಹಿಳಾ ಜೂನಿಯರ್ ಹಾಕಿ ತಂಡವು ಚಿಲಿ ರಾಷ್ಟ್ರೀಯ ತಂಡದ ಎದುರು 2–2ರಿಂದ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಚಿಲಿ ಪ್ರವಾಸದಲ್ಲಿ ಭಾರತ ತಂಡಕ್ಕೆ ಇದು ನಾಲ್ಕನೇ ಪಂದ್ಯವಾಗಿತ್ತು.

ಇಲ್ಲಿಯ ಪ್ರಿನ್ಸ್ ಆಫ್‌ ವೇಲ್ಸ್ ಕಂಟ್ರಿ ಕ್ಲಬ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡದ ಪರ ದೀಪಿಕಾ (40ನೇ ನಿಮಿಷ) ಮತ್ತು ಗಗನದೀಪ್ ಕೌರ್‌ (55ನೇ ನಿಮಿಷ) ಗೋಲು ದಾಖಲಿಸಿದರು. ಚಿಲಿ ತಂಡಕ್ಕೆ ಮರಿಯಾನ ಡೆಲ್‌ ಜೇಸಸ್‌ ಲಾಗೋಸ್‌ (21ನೇ ನಿ.) ಮುನ್ನಡೆ ತಂದುಕೊಟ್ಟಿದ್ದರು. ಫರ್ನಾಂಡಾ ವಿಲ್ಲಾಗ್ರನ್‌ (51ನೇ ನಿ.) ತಂಡದ ಎರಡನೇ ಗೋಲು ಗಳಿಸಿದರು.

ಭಾರತ ಜೂನಿಯರ್ ತಂಡವು ಹಲವು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಕೈಚೆಲ್ಲಿತು. ಇವುಗಳೆಲ್ಲ ಗೋಲುಗಳಾಗಿ ಪರಿವರ್ತನೆಯಾಗಿದ್ದರೆ ಗೆಲುವಿನ ಅವಕಾಶ ಹೆಚ್ಚು ಇತ್ತು.

ಶನಿವಾರ ಹಾಗೂ ಭಾನುವಾರ ನಡೆಯುವ ಹಣಾಹಣಿಗಳಲ್ಲಿ ಭಾರತ ಜೂನಿಯರ್ ಮಹಿಳೆಯರು ಚಿಲಿ ತಂಡವನ್ನು ಎದುರಿಸಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು