ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿ: ತನ್ನು, ಪ್ರಿಯಾ ವಿಶ್ವ ಚಾಂಪಿಯನ್‌

Last Updated 23 ಜುಲೈ 2021, 2:58 IST
ಅಕ್ಷರ ಗಾತ್ರ

ಬುಡಾಪೆಸ್ಟ್‌ (ಹಂಗರಿ): ಯುವ ಕುಸ್ತಿಪಟುಗಳಾದ ತನ್ನು ಮತ್ತು ಪ್ರಿಯಾ ಅವರುಗುರುವಾರ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದರು.

ಇಲ್ಲಿ ನಡೆಯುತ್ತಿರುವ ಕೆಡೆಟ್ ವಿಶ್ವ ಚಾಂಪಿಯನ್‌ಷಿಪ್‌ನ 43 ಕೆಜಿ ವಿಭಾಗದ ಫೈನಲ್‌ನಲ್ಲಿ ತನ್ನು ಅವರು ಬೆಲಾರಸ್‌ನ ವಲೇರಿಯಾ ಮಿಕಿಶಿಚ್ ವಿರುದ್ಧ ಜಯ ಗಳಿಸಿದರು. 73 ಕೆಜಿ ವಿಭಾಗದಲ್ಲಿ ಪ್ರಿಯಾ 5–0ಯಿಂದ ಬೆಲಾರಸ್‌ನ ಸೆನಿಯಾ ಪಟಪೊವಿಚ್‌ ಎದುರು ಗೆಲುವು ಸಾಧಿಸಿದರು.

ಒಂದು ಪಾಯಿಂಟ್ ಕೂಡ ಬಿಟ್ಟುಕೊಡದೆ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದ ತನ್ನು ಅವರಿಗೆ ಆರಂಭದಲ್ಲಿ ಸ್ವಲ್ಪ ಪ್ರತಿರೋಧ ಒಡ್ಡುವಲ್ಲಿ ಎದುರಾಳಿ ಕುಸ್ತಿಪಟು ಯಶಸ್ವಿಯಾದರು. ಆದರೆ ತಕ್ಷಣ ಚೇತರಿಸಿಕೊಂಡ ತನ್ನು ಏಕಪಕ್ಷೀಯವಾಗಿ ಜಯದತ್ತ ಮುನ್ನುಗ್ಗಿದರು.

48 ಕೆಜಿ ವಿಭಾಗದಲ್ಲಿ ಅಮನ್ ಗುಲಿಯಾ ಮತ್ತು 80 ಕೆಜಿ ವಿಭಾಗದಲ್ಲಿ ಸಾಗರ್ ಜಗ್ಲಾನ್ ಪ್ರಶಸ್ತಿ ಗೆದ್ದುಕೊಂಡರು. ಈ ಮೂಲಕ ಭಾರತ ಇದೇ ಮೊದಲ ಬಾರಿ ತಂಡ ಚಾಂಪಿಯನ್‌ಷಿಪ್‌ ತನ್ನದಾಗಿಸಿಕೊಂಡಿತು.

65 ಕೆಜಿ ವಿಭಾಗದಲ್ಲಿ ವರ್ಷಾ ಕಂಚಿನ ಪದಕ ಗೆದ್ದುಕೊಂಡರು. ಟರ್ಕಿಯ ದುಯ್ಗು ಜೆನ್ ಅವರನ್ನು ವರ್ಷಾ ಮಣಿಸಿದರು.

ಭಾರತ ಒಟ್ಟಾರೆ 147 ಪಾಯಿಂಟ್‌ಗಳೊಂದಿಗೆ ಬಲಿಷ್ಠ ಅಮೆರಿಕವನ್ನು ನಾಲ್ಕು ಪಾಯಿಂಟ್‌ಗಳಿಂದ ಹಿಂದಿಕ್ಕಿತು. ರಷ್ಯಾ 140 ಪಾಯಿಂಟ್ ಗಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT