ಗುರುವಾರ , ಮಾರ್ಚ್ 23, 2023
22 °C

ಕುಸ್ತಿ: ಅಮನ್‌ಗೆ ಕಂಚು

ಪಿಟಿಐ Updated:

ಅಕ್ಷರ ಗಾತ್ರ : | |

ಜಗ್ರೆಬ್‌, ಕ್ರೊವೇಷ್ಯಾ: ಭಾರತದ ಅಮನ್‌ ಶೆರಾವತ್‌ ಅವರು ಕ್ರೊವೇಷ್ಯಾದಲ್ಲಿ ನಡೆಯುತ್ತಿರುವ ಜಗ್ರೆಬ್‌ ಓಪನ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಜಯಿಸಿದ್ದಾರೆ.

ಕಂಚಿನ ಪದಕ ನಿರ್ಣಯಿಸಲು ನಡೆದ ಪೈಪೋಟಿಯಲ್ಲಿ 17 ವರ್ಷದ ಅಮನ್‌ ಅವರು 10–4 ರಲ್ಲಿ ಅಮೆರಿಕದ ರೋಡ್ಸ್‌ ರಿಚರ್ಡ್ಸ್‌ ಅವರನ್ನು ಮಣಿಸಿದರು.

ಅಜರ್‌ಬೈಜಾನ್‌ನ ಅಲಿಅಬ್ಬಾಸ್ ರಜಾಜೇದ್‌ ಚಿನ್ನ ಗೆದ್ದರು. ಫೈನಲ್‌ನಲ್ಲಿ ಅವರು 2–0 ರಲ್ಲಿ ಜಪಾನ್‌ನ ಯುಟೊ ನಿಶಿಯುಚಿ ವಿರುದ್ಧ ಜಯಿಸಿದರು. ಇನ್ನೊಂದು ಕಂಚಿನ ಪದಕ ಜಾರ್ಜಿಯದ ಬೆಕಾ ಬುಜಿಯಶ್ವಿಲಿ ಅವರ ಪಾಲಾಯಿತು.

ಕ್ವಾರ್ಟರ್‌ ಫೈನಲ್‌ನಲ್ಲಿ ಜಾರ್ಜಿಯದ ರಾಬರ್ಟಿ ದಿಂಗಶ್ವಿಲಿ ಅವರನ್ನು ಮಣಿಸಿದ್ದ ಅಮನ್‌, ಸೆಮಿಫೈನಲ್‌ನಲ್ಲಿ ನಿಶಿಯುಚಿ ಕೈಯಲ್ಲಿ ಸೋತಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು