ನವದೆಹಲಿ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಾರಿತ್ರಿಕ ಸಾಧನೆ ಮಾಡಿದ ಭಾರತ ಪ್ಯಾರಾ ಅಥ್ಲೀಟ್ಸ್ ಸೋಮವಾರ ತವರಿಗೆ ವಾಪಸಾದರು. ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಅವರಿಗೆ ಹೃತ್ಪೂರ್ವಕ ಸ್ವಾಗತ ಕೋರಲಾಯಿತು.
ಭಾರತದ ಕೊನೆಯ ತಂಡದಲ್ಲಿ ಬ್ಯಾಡ್ಮಿಂಟನ್ ಆಟಗಾರರು, ಶೂಟರ್‌ಗಳು ಮತ್ತು ರಿಕರ್ವ್ ಆರ್ಚರಿ ತಂಡದವರು ಇದ್ದರು. ಅವರು ಬರುವ ವಿವರ ತಿಳಿದ ಅಭಿಮಾನಿಗಳು ಮತ್ತು ಸಂಬಂಧಿಕರು ಹೂವಿನ ಹಾರ ಹಾಕಿ ಅಭಿನಂದಿಸಿ ಸಂಭ್ರಮಿಸಿದರು. ವಿಮಾನ ನಿಲ್ದಾಣದ ಸಿಬ್ಬಂದಿ ಕೂಡ ಅವರೊಂದಿಗೆ ಸಂಭ್ರಮಿಸಿದರು. ನಂತರ ತೆರೆದ ವಾಹನದಲ್ಲಿ ಕರೆದುಕೊಂಡು ಹೋಗಲಾಯಿತು.
ಭಾರತ ಈ ಬಾರಿ ಗರಿಷ್ಠ ಸಾಧನೆ ಮಾಡಿದೆ. ಐದು ಚಿನ್ನ ಸೇರಿದಂತೆ ಒಟ್ಟು 19 ಪದಕಗಳನ್ನು ಗೆದ್ದುಕೊಂಡಿರುವ ಭಾರತ ಪದಕ ಪಟ್ಟಿಯಲ್ಲಿ 24ನೇ ಸ್ಥಾನ ಗಳಿಸಿದೆ.ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಪದಕ ಗೆದ್ದ ಐಎಎಸ್ ಅಧಿಕಾರಿ, ಕನ್ನಡಿಗ ಸುಹಾಸ್ ಯತಿರಾಜ್, ಶೂಟಿಂಗ್‌ನಲ್ಲಿ ಚಿನ್ನ ಮತ್ತು ಕಂಚು ಗಳಿಸಿದ 19 ವರ್ಷದ ಅವನಿ ಲೇಖರಾ, ಚಿನ್ನ ಗೆದ್ದ ಬ್ಯಾಡ್ಮಿಂಟನ್ ಪಟುಗಳಾದ ಪ್ರಮೋದ್ ಭಗತ್ ಮತ್ತು ಕೃಷ್ಣ ನಗಾರ್, ಕಂಚು ಗಳಿಸಿದ ಮನೋಜ್ ಸರ್ಕಾರ್, ಶೂಟರ್‌ಗಳಾದ ಸಿಂಘರಾಜ್ ಅಡಾನ ಮತ್ತು ಮನೀಷ್ ನರ್ವಾಲ್ ಸಂಜೆ ಬಂದಿಳಿದರು.
ಟೇಬಲ್ ಟೆನಿಸ್‌ನಲ್ಲಿ ಬೆಳ್ಳಿ ಗೆದ್ದ ಭಾವಿನಾ ಬೆನ್ ಪಟೇಲ್ ಬೆಳಿಗ್ಗೆ ಬಂದಿಳಿದರು. ಗುರುವಾರ ಎಲ್ಲ ಅಥ್ಲೀಟ್‌ಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.