ಶುಕ್ರವಾರ, ನವೆಂಬರ್ 22, 2019
25 °C
ದಕ್ಷಿಣ ವಲಯ ಪೆಂಕಾಕ್‌ ಸಿಲಟ್‌ ಚಾಂಪಿಯನ್‌ಷಿಪ್‌

ಬೀಚ್‌ ವಿಭಾಗದಲ್ಲಿ ರಾಜ್ಯ ತಂಡಕ್ಕೆ ಅಗ್ರಸ್ಥಾನ

Published:
Updated:

ಬೆಂಗಳೂರು: ಕರ್ನಾಟಕ ತಂಡವು ದಕ್ಷಿಣ ವಲಯ ಪೆಂಕಾಕ್ ಸಿಲಟ್‌ನ ಬೀಚ್‌ ವಿಭಾಗದ ಸ್ಪರ್ಧೆಯಲ್ಲಿ ಅಗ್ರಸ್ಥಾನ ಗಳಿಸಿತು. ಆಂಧ್ರಪ್ರದೇಶದ ಓಂಗೋಲುವಿನ ಕೊತ್ತಪಟ್ಟಣಂ ಬೀಚ್‌ನಲ್ಲಿ ನಡೆದ ಚಾಂಪಿಯನ್‌ಷಿಪ್‌ ಶನಿವಾರ ಮುಕ್ತಾಯವಾಯಿತು.

ಆಂಧ್ರಪ್ರದೇಶದ 110, ಕರ್ನಾಟಕದ 41, ಕೇರಳದ 21, ತಮಿಳುನಾಡಿನ 20, ತೆಲಂಗಾಣದ 23 ಮಂದಿ ಸೇರಿ ಒಟ್ಟು 220 ಆಟಗಾರರು ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದರು.

ಆತಿಥೇಯ ಆಂಧ್ರಪ್ರದೇಶ ಟೂರ್ನಿಯ ಚಾಂಪಿಯನ್‌ ಪಟ್ಟ ಧರಿಸಿತು. ಕರ್ನಾಟಕ ತಂಡವು ಸೇನಿ ಹಾಗೂ ಬೀಚ್‌ ವಿಭಾಗದಲ್ಲಿ ಅಗ್ರಸ್ಥಾನ ಪಡೆಯಿತು. ಕೇರಳ ರನ್ನರ್‌ ಅಪ್‌ ಸ್ಥಾನ ಗಳಿಸಿತು.

ಪ್ರತಿಕ್ರಿಯಿಸಿ (+)