ಗುರುವಾರ , ನವೆಂಬರ್ 21, 2019
21 °C
ಅಭ್ಯಾಸದ ವೇಳೆ ಹಿಂಗಾಲಿಗೆ ಗಾಯ

ವಿಶ್ವ ಅಥ್ಲೆಟಿಕ್ಸ್‌ ಕೂಟಕ್ಕೆ ಎಲಿಜ ಅಲಭ್ಯ

Published:
Updated:

ನೈರೋಬಿ (ಎಎಫ್‌ಪಿ): ಕೇನ್ಯಾದ ಮಧ್ಯಮ ಅಂತರದ ಓಟಗಾರ ಎಲಿಜ ಮನಂಗೋಯಿ ಅವರು ದೋಹಾದಲ್ಲಿ ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ. ಅವರು 1,500 ಮೀ. ಓಟದಲ್ಲಿ ವಿಶ್ವ ಚಾಂಪಿಯನ್ ಆಗಿದ್ದಾರೆ.

ತರಬೇತಿ ವೇಳೆ ಹಿಂಗಾಲಿಗೆ ಆದ ಗಾಯದಿಂದಾಗಿ 26 ವರ್ಷದ ಮನಂಗೋಯಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಕೆನ್ಯಾದ ರಾಷ್ಟ್ರೀಯ ಟ್ರಯಲ್ಸ್‌ನಲ್ಲಿ ಅವರು ಭಾಗವಹಿಸಿರಲಿಲ್ಲ. ಆದರೆ ನಾಲ್ಕು ಸದಸ್ಯರ 1,500 ಮೀ. ಓಟದ ತಂಡದಲ್ಲಿ ಅವರನ್ನೂ ಸೇರ್ಪಡೆ ಮಾಡಿ, ಪಟ್ಟ ಉಳಿಸಿಕೊಳ್ಳಲು ಅವಕಾಶ ನೀಡಲಾಗಿತ್ತು.

ಮೊಣಕಾಲಿನ ಸ್ನಾಯುರಜ್ಜು ನೋವಿನಿಂದ ಚೇತರಿಸಿಕೊಂಡಿದ್ದ ಅವರು ಮತ್ತೆ ಗಾಯಾಳಾದ ವಿಷಯವನ್ನು ಸೋಮವಾರ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಗಾಯ ಗುಣವಾಗಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಅವರ ಕೋಚ್‌ ಬರ್ನಾರ್ಡ್‌ ಊಮ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)