ಸುಜಾತ ‘ಹ್ಯಾಟ್ರಿಕ್‌’ ಗೋಲು

7
ಅಂತರ ಶಾಲಾ ಹಾಕಿ ಟೂರ್ನಿ: ಫೈನಲ್‌ಗೆ ಕೂಡಿಗೆ ಕ್ರೀಡಾ ಶಾಲೆ

ಸುಜಾತ ‘ಹ್ಯಾಟ್ರಿಕ್‌’ ಗೋಲು

Published:
Updated:

ಬೆಂಗಳೂರು: ಸುಜಾತ ಗಳಿಸಿದ ‘ಹ್ಯಾಟ್ರಿಕ್‌’ ಸಹಿತ ಐದು ಗೋಲುಗಳ ಬಲದಿಂದ ಕೂಡಿಗೆಯ ಕ್ರೀಡಾ ಶಾಲೆ ತಂಡ ಬಿಎಚ್‌ಎ ಅಂತರ ಶಾಲಾ ಹಾಕಿ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದೆ.

ಸೋಮವಾರ ನಡೆದ ಸೆಮಿಫೈನಲ್‌ನಲ್ಲಿ ಕ್ರೀಡಾ ಶಾಲೆ 7–0 ಗೋಲುಗಳಿಂದ ಚಿನ್ಮಯ ವಿದ್ಯಾಲಯ ತಂಡವನ್ನು ಮಣಿಸಿತು.

12, 14 ಮತ್ತು 24ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಸುಜಾತ ‘ಹ್ಯಾಟ್ರಿಕ್‌’ ಪೂರೈಸಿದರು. ನಂತರವೂ ಅವರು ಕೈಚಳಕ ತೋರಿದರು. 27 ಮತ್ತು 32ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿದರು.

ಈ ತಂಡದ ಅಕ್ಷತಾ (18) ಮತ್ತು ಚೈತ್ರಾ (37) ತಲಾ ಒಂದು ಗೋಲು ಬಾರಿಸಿದರು.

ಮಂಗಳವಾರ ನಡೆಯುವ ಫೈನಲ್‌ನಲ್ಲಿ ಕೂಡಿಗೆ ಶಾಲೆ, ಹಾಸನದ ಕ್ರೀಡಾ ಶಾಲೆ ವಿರುದ್ಧ ಸೆಣಸಲಿದೆ.

ನಾಲ್ಕರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಹಾಸನದ ಕ್ರೀಡಾ ಶಾಲೆ 3–0 ಗೋಲುಗಳಿಂದ ಪೊನ್ನಂಪೇಟೆಯ ಕ್ರೀಡಾ ಶಾಲೆ ಎದುರು ಗೆದ್ದಿತು.

ವಿಜಯಿ ತಂಡದ ಯಮುನಾ (10ನೇ ನಿ), ಸುಶ್ಮಿತಾ (19ನೇ ನಿ) ಮತ್ತು ಸಿ.ಎಂ.ಶಾನಾ (24ನೇ ನಿ.) ತಲಾ ಒಂದು ಗೋಲು ದಾಖಲಿಸಿದರು.

ಮೂರನೇ ಸ್ಥಾನಕ್ಕಾಗಿ ನಡೆಯುವ ‘ಪ್ಲೇ ಆಫ್‌’ ಹಣಾಹಣಿಯಲ್ಲಿ ಚಿನ್ಮಯ ವಿದ್ಯಾಲಯ ಮತ್ತು ಪೊನ್ನಂಪೇಟೆಯ ಕ್ರೀಡಾ ಶಾಲೆ ಮುಖಾಮುಖಿಯಾಗಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !