ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥ್ಲೆಟಿಕ್ಸ್‌: ಮಂಗಳೂರು ವಿವಿ ಸಮಗ್ರ ಪ್ರಶಸ್ತಿ ಹ್ಯಾಟ್ರಿಕ್

79ನೇ ಅಖಿಲ ಭಾರತ ಅಂತರ ವಿವಿ ಚಾಂಪಿಯನ್ ಷಿಪ್
Last Updated 28 ನವೆಂಬರ್ 2018, 19:36 IST
ಅಕ್ಷರ ಗಾತ್ರ

ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯ ತಂಡವು 79ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್‌ನಲ್ಲಿ ಸತತವಾಗಿ ಮೂರನೇ ಬಾರಿಯೂ ಸಮಗ್ರ ಪ್ರಶಸ್ತಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದೆ.

ಇಲ್ಲಿನ ಸ್ವರಾಜ್ ಮೈದಾನದಲ್ಲಿ ಬುಧವಾರ ಮುಕ್ತಾಯಗೊಂಡ ಈ ಕೂಟದಲ್ಲಿ ಮಂಗಳೂರು ವಿಶ್ವವಿದ್ಯಾಲಯವು ಒಟ್ಟು 188 ಪಾಯಿಂಟ್ ಗಳಿಸಿ ಸಮಗ್ರ ಪ್ರಶಸ್ತಿಗೆ ಭಾಜನವಾಯಿತು. 79 ವರ್ಷಗಳ ಕ್ರೀಡಾ ಇತಿಹಾಸದಲ್ಲಿ ವಿಶ್ವವಿದ್ಯಾಲಯವೊಂದು ಗಳಿಸಿದ ಅತ್ಯಧಿಕ ಪಾಯಿಂಟ್ಸ್ ಇದಾಗಿದೆ. ಕೊಟ್ಟಾಯಂನ ಮಹಾತ್ಮ ಗಾಂಧಿ ವಿ.ವಿ 114 ಮತ್ತು ಕ್ಯಾಲಿಕಟ್‌ ವಿ.ವಿ 72 ಆಂಕಗಳನ್ನು ಗಳಿಸಿತು. ಮಂಗಳೂರು ವಿಶ್ವವಿದ್ಯಾಲಯ ತಂಡದ ಒಟ್ಟು 80 ಕ್ರೀಡಾಪಟುಗಳಲ್ಲಿ 72 ಮಂದಿ ಆಳ್ವಾಸ್ ಶಿಕ್ಷಣ ಸಂಸ್ಥೆಯವರಾಗಿದ್ದಾರೆ. ಆಳ್ವಾಸ್‍ನ ಕ್ರೀಡಾ ಪಟುಗಳೇ 11 ಚಿನ್ನ, 9 ಬೆಳ್ಳಿ, 4 ಕಂಚಿನ ಪದಕ ಗಳಿಸಿದ್ದಾರೆ.

ಉತ್ತಮ ಅಥ್ಲೀಟ್‌ಗಳು: ಭಾರತೀ ದಾಸನ್‌ ವಿ.ವಿಯ 200 ಮೀಟರ್ ಓಟಗಾರ್ತಿ ಧನಲಕ್ಷ್ಮಿ ಎಸ್. ಮತ್ತು ಮುಂಬೈ ವಿವಿಯ ಟ್ರಿಪಲ್‌ ಜಂಪ್‌ ಪಟು ಜೈಷಾ ಪ್ರದಿ ಉತ್ತಮ ಅಥ್ಲೀಟ್‌ಗಳಾಗಿ ಹೊರಹೊಮ್ಮಿದರು.

ದಾಖಲೆ ಮಾಡಿದವರಿಗೆ ₹ 25 ಸಾವಿರ, ಚಿನ್ನದ ಪದಕ ವಿಜೇತರಿಗೆ ತಲಾ ₹ 20 ಸಾವಿರ, ಬೆಳ್ಳಿ ಗೆದ್ದವರಿಗೆ ತಲಾ ₹ 15 ಸಾವಿರ, ಕಂಚಿನ ಪದಕ ಗೆದ್ದವರಿಗೆ ₹ 10 ಸಾವಿರ ನೀಡ ಲಾಯಿತು. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಮೋಹನ ಆಳ್ವ, ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಕಿಶೋರ್ ಕುಮಾರ್ ಇದ್ದರು.

ಫಲಿತಾಂಶ: ಪುರುಷರು: 200 ಮೀ ಓಟ: ಮೊಹಮ್ಮದ್ ಅಜ್ಮಲ್ (ಮಹಾತ್ಮ ಗಾಂಧಿ ವಿವಿ ಕೊಟ್ಟಾಯಂ: ಕಾಲ: 21. 01 ಸೆ )-1, ಏಲಾಕ್ಯದಾಸನ್ ವಿ.ಕೆ.- (ಮಂ ಗಳೂರು ವಿವಿ)-2, ಗುರುವೀಂದರ್ ಸಿಂಗ್ (ಗುರುನಾನಕ್ ವಿವಿ ಪಂಜಾಬ್)-3. ಹಾಫ್ ಮ್ಯಾರಾಥಾನ್: ಅನಿಲ್‍ಕುಮಾರ್ (ಮಂಗಳೂರು ವಿಶ್ವವಿದ್ಯಾಲಯ: ಕಾಲ: 1 ಗಂ.08ನಿ,23.79ಸೆ )-1, ರವೀಂದ್ರ ಕುಮಾರ್ (ಪಂಜಾಬ್ ವಿಶ್ವವಿದ್ಯಾಲಯ, ಚಂಡೀಗಡ)-2, ಖುಷ್ಮೇಶಕುಮಾರ್ (ಮಂಗಳೂರು ವಿಶ್ವವಿದ್ಯಾಲಯ)-3,

ಮಹಿಳೆಯರು: ಹಾಫ್ ಮ್ಯಾರಾಥಾನ್: ನಿಖಿತಾ ರಾವತ್ (ಆರ್‍ಟಿಎಂ ವಿವಿ ನಾಗಪುರ; ಕಾಲ: 1 ಗಂ 19 ನಿ, 39.38 ಸೆ)-1, ರೇಣು- ಚೌಧರಿ ರಣ್‍ಬೀರ್‌ ಸಿಂಗ್ (ಜಿಂದ್ ವಿಶ್ವವಿದ್ಯಾಲಯ ಹರಿಯಾಣ)-2, ದಿವ್ಯಾಂಕಾ ಚೌಧರಿ (ಪಂಜಾಬ್ ವಿಶ್ವವಿದ್ಯಾಲಯ)-3. ಪೋಲ್ ವಾಲ್ಟ್: ಮರಿಯಾ ಜೈಸನ್(ಜೈನ್ ವಿವಿ, ಬೆಂಗಳೂರು – ಎತ್ತರ: 3.80 ಮೀಟರ್)-1, ಈ. ಬರಾನಿಕಾ (ಮದ್ರಾಸ್ ವಿವಿ, ಚೆನ್ನೈ)-2, ದಿವ್ಯಾ ಮೋಹನ್ (ಮಹಾತ್ಮ ಗಾಂಧಿ ವಿವಿ, ಕೊಟ್ಟಾಯಂ)-3. ಹ್ಯಾಮರ್ ಥ್ರೋ: ಕೆ.ಎಂ ರಿತು ಧಿಮಾನ್ (ಮಂಗಳೂರು ವಿವಿ: ದೂರ: 61.93 ಮೀ)-1, ರಂಜು ದೇವಿ (ಪಂಜಾಬ್ ಕೃಷಿ ವಿವಿ)-2, ವೇದಪಾಠಕ್‌ ಸುರಭ್ (ಸಾವಿತ್ರಿ ಬಾಯಿ ಫುಲೆ ವಿವಿ)-3.

3000 ಮೀ ಸ್ಟೀಪಲ್ ಚೇಸ್: ಶೀತಲ್ ಭಗತ್ (ಮಂಗಳೂರು ವಿವಿ ; ಕಾಲ: 10 ನಿ, 34.53 ಸೆ)-1, ಜ್ಯೋತಿ ಚವಾಣ್ (ಮಂಗಳೂರು ವಿವಿ)-2.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT