ಗುರುವಾರ , ಅಕ್ಟೋಬರ್ 24, 2019
21 °C

ಅಂತರರಾಷ್ಟ್ರೀಯ ಚೆಸ್‌ ಟೂರ್ನಿ 10ರಂದು ಆರಂಭ

Published:
Updated:

ಬೆಂಗಳೂರು: ಕಶ್ವಿ ಚೆಸ್ ಸ್ಕೂಲ್ ಕುಂದಾಪುರ ವತಿಯಿಂದ ಇದೇ 10ರಿಂದ 17ರವರೆಗೆ ಅಂತರರಾಷ್ಟ್ರೀಯ ಮಟ್ಟದ ಮುಕ್ತ ಫಿಡೆ ರೇಟಿಂಗ್ ಚೆಸ್‌ ಟೂರ್ನಿಯು ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ನಡೆಯಲಿದೆ.

‘ಟೂರ್ನಿಯನ್ನು ಕೋಟೇಶ್ವರದ ಹಳೆ ವಿದ್ಯಾರ್ಥಿಗಳ ಸಂಘ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಸಹಯೋಗದಲ್ಲಿ ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮ ಬಾರಿಗೆ ಆಯೋಜಿಸಲಾಗಿದೆ. ವಯಸ್ಸಿನ ಮಿತಿ ಇಲ್ಲ’ ಎಂದು ಕುಂದಾಪುರದ ಕಶ್ವಿ ಚೆಸ್ ಸ್ಕೂಲ್ ವ್ಯವಸ್ಥಾಪಕ ಬಿ. ನರೇಶ್ ಗುರುವಾರ ತಿಳಿಸಿದರು.

‘ಟೂರ್ನಿಗೆ ಕರ್ನಾಟಕ, ಕೇರಳ, ದೆಹಲಿ ಹಾಗೂ ಇತರ ರಾಜ್ಯಗಳಿಂದಲ್ಲದೆ, ವಿದೇಶದಿಂದಲೂ ಸ್ಪರ್ಧಿಗಳು ಬರಲಿದ್ದಾರೆ’ ಎಂದರು. 

ಟೂರ್ನಿಯು ಒಟ್ಟು ₹20.32 ಲಕ್ಷ ನಗದು ಬಹುಮಾನ ಒಳಗೊಂಡಿದೆ. 161 ಟ್ರೋಫಿಗಳನ್ನು ಪ್ರತಿ ವಿಭಾಗದ ಹಾಗೂ ವಿವಿಧ ವಯೋಮಿತಿಯಲ್ಲಿ ಗೆದ್ದವರಿಗೆ ಪ್ರತ್ಯೇಕವಾಗಿ ನೀಡಲಾಗುತ್ತದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)