ಇಂಟರನ್ಯಾಶನಲ್ ಸ್ಕೂಲ್ ಫೆಡರೇಶನ್ ಗೇಮ್ಸ್: ಪ್ರೇರಣಾ ಬ್ಯಾಡ್ಮಿಂಟನ್ ಚಾಂಪಿಯನ್

ಶಿರಸಿ: ಫ್ರಾನ್ಸ್‌ನಲ್ಲಿ ನಡೆಯುತ್ತಿರುವ 19 ವರ್ಷ ವಯೋಮಿತಿ ಒಳಗಿನವರ ಇಂಟರನ್ಯಾಶನಲ್ ಸ್ಕೂಲ್ ಫೆಡರೇಶನ್ ಗೇಮ್ಸ್‌ನ ಬ್ಯಾಂಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಶಿರಸಿಯ ಪ್ರೇರಣಾ ಶೇಟ್ ಚಿನ್ನದ ಪದಕ ಜಯಿಸಿದ್ದಾರೆ.
ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ತೈಪೆ ದ್ವೀಪ ರಾಷ್ಟ್ರದ ಸೈ ಯುನ್–ಶಾನ್ ವಿರುದ್ಧ 13-21, 21-12, 21-16 ಅಂತರದಲ್ಲಿ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟಕ್ಕೆ ಏರಿದರು.
‘ಪಂದ್ಯದ ಮಧ್ಯೆ ಗಾಯದ ಸಮಸ್ಯೆ ಕಾಣಿಸಿಕೊಂಡಿದ್ದರೂ ಧೃತಿಗೆಡದೆ ಮಗಳು ಆಟವಾಡಿ ಜಯಶಾಲಿಯಾದಳು’ ಎಂದು ಪ್ರೇರಣ ತಂದೆ ನಂದಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಈಕೆ ಶಿರಸಿಯ ಲಯನ್ಸ್ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಈಗಾಗಲೆ ಹಲವು ರಾಜ್ಯ, ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿಯೂ ಚಾಂಪಿಯನ್ ಆಗಿ ಗಮನಸೆಳೆದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.