ಪದಕ ಗೆಲ್ಲುವ ಕ್ರೀಡೆ ಪೆಂಕಾಕ್‌ ಸಿಲಟ್‌: ಬಾತ್ರಾ

7

ಪದಕ ಗೆಲ್ಲುವ ಕ್ರೀಡೆ ಪೆಂಕಾಕ್‌ ಸಿಲಟ್‌: ಬಾತ್ರಾ

Published:
Updated:

ನವದೆಹಲಿ: ಫುಟ್‌ಬಾಲ್‌ ತಂಡವನ್ನು ಏಷ್ಯನ್‌ ಕ್ರೀಡಾಕೂಟದಿಂದ ಕೈಬಿಟ್ಟದ್ದನ್ನು ಭಾರತ ಒಲಿಂಪಿಕ್‌ ಸಂಸ್ಥೆಯ (ಐಒಎ) ನರೇಂದ್ರ ಬಾತ್ರಾ ಸಮರ್ಥಿಸಿಕೊಂಡಿದ್ದಾರೆ. ‘ಪದಕ ಗೆಲ್ಲುವ ಕ್ರೀಡೆಯಾದ್ದರಿಂದ ಪೆಂಕಾಕ್ ಸಿಲಟ್‌ ತಂಡವನ್ನು ಕಳುಹಿಸಲು ನಿರ್ಧರಿಸಲಾಗಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಪೆಂಕಾಕ್‌ ಸಿಲಟ್ ಬಗ್ಗೆ ಸಂಸ್ಥೆಗೆ ವೈಯಕ್ತಿಕ ಒಲವು ಇಲ್ಲ. ಆ ಕ್ರೀಡೆಯಲ್ಲಿ ಪಾಲ್ಗೊಂಡವರು ಈಗಾಗಲೇ ಪದಕಗಳನ್ನು ಗೆದ್ದಿದ್ದಾರೆ. ಈ ಕ್ರೀಡೆಯಂತೆ ಹೆಚ್ಚು ತಿಳಿಯದೇ ಇರುವ ಇನ್ನೂ ಆರರಷ್ಟು ಕ್ರೀಡೆಗಳು ಇವೆ. ಆದರೆ ಅವುಗಳನ್ನು ಸೇರಿಸುವ ಕುರಿತು ಸಂಸ್ಥೆ ಯೋಚಿಸಿಲ್ಲ’ ಎಂದು ಬಾತ್ರಾ ತಿಳಿಸಿದರು.

ಭಾರತ ಪುರುಷ ಮತ್ತು ಮಹಿಳಾ ಫುಟ್‌ಬಾಲ್ ತಂಡಗಳನ್ನು ಕೈಬಿಟ್ಟ ಐಒಎ, 22 ಸದಸ್ಯರ ಪೆಂಕಾಕ್ ಸಿಲಟ್ ತಂಡವನ್ನು ಕಳುಹಿಸಲು ನಿರ್ಧರಿಸಿದೆ. 2016ರಲ್ಲಿ ನಡೆದ ಏಷ್ಯಾ ಪೆಂಕಾಕ್ ಸಿಲಟ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಎರಡು ಬೆಳ್ಳಿ ಮತ್ತು ಐದು ಕಂಚಿನ ಪದಕ ಗೆದ್ದಿತ್ತು. ಆರು ಸದಸ್ಯರ ಸ್ಯಾಂಬೊ, 10 ಸದಸ್ಯರ ಸಾಫ್ಟ್ ಟೆನಿಸ್‌ ಮತ್ತು 14 ಮಂದಿಯ ಕುರಷ್ ತಂಡವನ್ನು ಕೂಡ ಭಾರತ ಕಳುಹಿಸಲಿದೆ. ಪೆಂಕಾಕ್‌ ಸಿಲಟ್‌ ಇಂಡೊನೇಷ್ಯಾದ ಸಮರ ಕಲೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !