ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್ ಧ್ಯೇಯವಾಕ್ಯಕ್ಕೆ ‘ಜೊತೆಯಾಗಿ’ ಸೇರ್ಪಡೆ

ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ ಅಧಿವೇಶನದಲ್ಲಿ ನಿರ್ಧಾರ
Last Updated 20 ಜುಲೈ 2021, 16:46 IST
ಅಕ್ಷರ ಗಾತ್ರ

ಟೋಕಿಯೊ: ‘ವೇಗವಾಗಿ, ಎತ್ತರಕ್ಕೆ, ಶಕ್ತಿಶಾಲಿಯಾಗಿʼಎಂಬ ಒಲಿಂಪಿಕ್ಸ್ ಧ್ಯೇಯವಾಕ್ಯವನ್ನು ಮಂಗಳವಾರ ಪರಿಷ್ಕರಿಸಲಾಗಿದ್ದು, ‘ಜೊತೆಯಾಗಿʼಎಂಬ ಮತ್ತೊಂದು ಪದವನ್ನು ಸೇರಿಸಲಾಗಿದೆ. ಮಂಗಳವಾರ ಇಲ್ಲಿ ನಡೆದ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ ಅಧಿವೇಶನದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಟೋಕಿಯೊ ಒಲಿಂಪಿಕ್ಸ್ ಧ್ಯೇಯವಾಕ್ಯ ಈಗ ‘ವೇಗವಾಗಿ, ಎತ್ತರಕ್ಕೆ, ಶಕ್ತಿಶಾಲಿಯಾಗಿ –ಜೊತೆಯಾಗಿʼಎಂದು ಬದಲಾಗಿದೆ.

‘ಟುಗೆದರ್ (ಜೊತೆಯಾಗಿ)ʼಎಂಬ ಪದವನ್ನು ಸೇರಿಸುವ ಪ್ರಸ್ತಾವವನ್ನುಏಪ್ರಿಲ್‌ನಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ (ಐಒಸಿ) ಅಧ್ಯಕ್ಷ ಥಾಮಸ್ ಬಾಕ್ ಮುಂದಿಟ್ಟಿದ್ದರು. ಇದಕ್ಕೆ ಸಮಿತಿಯ ಕಾರ್ಯಕಾರಿ ಮಂಡಳಿಯು ಅನುಮೋದನೆ ನೀಡಿತ್ತು. ಕೋವಿಡ್‌–19 ಪಿಡುಗಿನ ಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ ಅವರು ಈ ಸಲಹೆ ನೀಡಿದ್ದರು.

ಅಧಿವೇಶನದ ಸಂದರ್ಭದಲ್ಲಿ ಒಗ್ಗಟ್ಟಿನ ಮಹತ್ವವನ್ನು ಬಾಕ್ ಪುನರುಚ್ಚರಿಸಿದರು.

‘ಒಗಟ್ಟು ಎಂಬುದು ನಾವು ಮಾಡುವ ಪ್ರತಿಯೊಂದು ಕಾರ್ಯಕ್ಕೆ ಹೃದಯವಿದ್ದಂತೆ. ಕ್ರೀಡೆಯ ಮೂಲಕ ಜಗತ್ತನ್ನು ಉತ್ತಮ ತಾಣವನ್ನಾಗಿ ರೂಪಿಸುವ ನಮ್ಮ ಧ್ಯೇಯಕ್ಕೆ ಏಕತೆ ಇಂಧನವಾಗಿದೆ. ಏಕೆಂದರೆ ನಾವೆಲ್ಲರೂ ಜೊತೆಯಾಗಿ ನಿಂತರೆ ಮಾತ್ರ ವೇಗವಾಗಿ, ಉನ್ನತ ಗುರಿಯತ್ತ ಚಲಿಸಿ ಬಲಶಾಲಿಯಾಗಬಹುದು‘ ಎಂದು ಬಾಕ್ ಹೇಳಿದರು.

1894ರಲ್ಲಿ ನಡೆದ ಒಲಿಂಪಿಕ್ ಚಳವಳಿಯಲ್ಲಿ ಆಧುನಿಕ ಒಲಿಂಪಿಕ್ಸ್‌ನ ಸಂಸ್ಥಾಪಕ ಪಿಯರೆ ಡಿ ಕೌಬಾರ್ಟನ್ ಅವರ ಮನವಿಯ ಮೇರೆಗೆ ಧ್ಯೇಯವಾಕ್ಯವನ್ನು ಅಂಗೀಕರಿಸಲಾಗಿತ್ತು.

ಕೂಟ ಸುರಕ್ಷಿತವಾಗಿ ನಡೆಯುವುದನ್ನು ವಿಶ್ವ ನೋಡಬೇಕು

ಒಲಿಂಪಿಕ್ಸ್ ಅನ್ನು ಜಪಾನ್ ಸುರಕ್ಷಿತವಾಗಿ ಆಯೋಜಿಸಲಿದೆ ಎಂಬುದನ್ನು ವಿಶ್ವದ ಜನತೆ ನೋಡುಬೇಕು ಎಂದು ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ ಹೇಳಿದ್ದಾರೆ.

ಸ್ಥಳೀಯ ತುರ್ತು ಪರಿಸ್ಥಿತಿ ಮತ್ತು ಸಾರ್ವಜನಿಕರಿಂದ ವ್ಯಾಪಕ ವಿರೋಧದ ನಡುವೆಯೂ ಹತ್ತಾರು ಕ್ರೀಡಾಪಟುಗಳು, ಅಧಿಕಾರಿಗಳು, ಸಿಬ್ಬಂದಿ ಮತ್ತು ಮಾಧ್ಯಮಗಳು ಜಪಾನ್‌ಗೆ ಆಗಮಿಸುತ್ತಿವೆ.

ಐಒಸಿ ಸದಸ್ಯರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಸುಗಾ, ಜಗತ್ತು ದೊಡ್ಡ ಬಿಕ್ಕಟ್ಟು ಎದುರಿಸುತ್ತಿದೆ. ನಾಗರಿಕರ ಆರೋಗ್ಯ ಸುರಕ್ಷತೆ ನಮ್ಮ ಜವಾಬ್ದಾರಿ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT