ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಹಾರ್ದದ ಸಂಕೇತ ಇಫ್ತಾರ್‌ಕೂಟ

Last Updated 16 ಜೂನ್ 2018, 10:30 IST
ಅಕ್ಷರ ಗಾತ್ರ

ಲಿಂಗಸುಗೂರು: ‘ಮುಸ್ಲಿಂ ಜನಾಂಗದ ಪವಿತ್ರ ಹಬ್ಬಗಳಲ್ಲಿ ಒಂದಾದ ಈದ್‌–ಉಲ್‌–ಫಿತ್ರ್ ಹಬ್ಬದಲ್ಲಿ ಉಪವಾಸ ವ್ರತ ಮಾಡುವವರನ್ನು ಕರೆದು ಇಫ್ತಾರ್ ಕೂಟ ಆಯೋಜಿಸುವುದು ಸಹೋದರತ್ವ ಬಾಂಧವ್ಯದ ಸಂಕೇತವಾಗಿದೆ’ ಎಂದು ಶಾಸಕ ಡಿ.ಎಸ್‌. ಹೂಲಗೇರಿ ಹೇಳಿದರು.

ಗುರುವಾರ ಸಂಜೆ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಮಾತನಾಡಿದ ಅವರು, ‘ವಿವಿಧ ಭಾಷೆ, ಧರ್ಮ, ಜಾತಿಗಳ ಮಧ್ಯೆ ಏಕತೆ ಸಂದೇಶವನ್ನು ವಿಶ್ವಕ್ಕೆ ನೀಡಿರುವ ಭಾರತೀಯ ಸಂಸ್ಕೃತಿ ಶ್ರೇಷ್ಠವಾದದ್ದು. ಬಹುತೇಕ ಹಬ್ಬಗಳನ್ನು ಹಿಂದು ಮುಸ್ಲಿಂ ಬಾಂಧವರು ಕೂಡಿಯೇ ಆಚರಿಸಿಕೊಂಡು ಬಂದಿರುವುದು ವಾಡಿಕೆ. ಈ ಭಾವ್ಯಕ್ಯ ಹೀಗೆಯೆ ಮುಂದುವರೆಸಿಕೊಂಡು ಹೋಗೋಣ’ ಎಂದು ಮನವಿ ಮಾಡಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶರಣಪ್ಪ ಮೇಟಿ, ತಂಜಿಮುಲ್‌ ಸಮಿತಿ ಉಪಾಧ್ಯಕ್ಷ ಲಾಲಅಹ್ಮದಸಾಬ, ಪುರಸಭೆ ಅಧ್ಯಕ್ಷ ಖಾದರಪಾಷ, ತಾಲ್ಲೂಕು ಪಂಚಾಯಿತಿ ಸದಸ್ಯ ವಾಹಿದ್‌ಖಾದ್ರಿ, ಮುಖಂಡರಾದ ಭೂಪನಗೌಡ ಕರಡಕಲ್ಲ, ಗುಂಡಪ್ಪ ನಾಯಕ, ಅನೀಸಪಾಷ, ಎಂ.ಡಿ. ರಫಿ, ಬಾಬಾಖಾಜಿ, ಜಲಾಲುದ್ದೀನ್‌, ಪರಶುರಾಮ, ಗುಂಡಪ್ಪ ಸಾಹುಕಾರ, ಅಮರೇಶ ಮೇದಿನಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT