ವಿಶ್ವ ಚೆಸ್‌ ಟೂರ್ನಿಗೆ ಹೊನ್ನಾವರದ ಸಮರ್ಥ

7

ವಿಶ್ವ ಚೆಸ್‌ ಟೂರ್ನಿಗೆ ಹೊನ್ನಾವರದ ಸಮರ್ಥ

Published:
Updated:

ಕಾರವಾರ: ಜೆಕ್‌ ಗಣರಾಜ್ಯದ ಪ್ರೇಗ್‌ ನಲ್ಲಿ ಆಯೋಜನೆ ಯಾಗಿರುವ ಅಂಗವಿಕಲರ ಐಪಿಸಿಎ ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸಮರ್ಥ ಜಿ. ರಾವ್‌ ಪಾಲ್ಗೊಂಡಿದ್ದಾರೆ.

ಈ ಟೂರ್ನಿಯಲ್ಲಿ ಭಾರತದ ಒಟ್ಟು ಮೂವರು ಸ್ಪರ್ಧಿಗಳು ಭಾಗವಹಿಸಿದ್ದಾರೆ. ಸಮರ್ಥ ಜೊತೆ ಪುಣೆಯ ಶಶಿಕಾಂತ ಕುತ್ವಾಲ್ ಹಾಗೂ ತಮಿಳುನಾಡಿನ ತಿರು ಚಿರಾಪಳ್ಳಿಯ ಕೆ.ಜೆನ್ನಿತಾ ಆ್ಯಂಟೊ ತೆರಳಿದ್ದಾರೆ.

ಟೂರ್ನಿ ಜೂ. 21ರಂದು ಆರಂಭವಾಗಿದ್ದು 30ರ ವರೆಗೆ ನಡೆಯಲಿದೆ.ಸಮರ್ಥ್‌ , ಹೊನ್ನಾವರದ ಸಿಂಡಿಕೇಟ್ ಬ್ಯಾಂಕ್‌ನ ಉದ್ಯೋಗಿ ಜಗದೀಶ್ ರಾವ್ ಹಾಗೂ ವಿನುತಾ ಭಟ್ ದಂಪತಿಯ ಪುತ್ರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !