ಮೇ 13ರಿಂದ ಕಬಡ್ಡಿ ಲೀಗ್‌

ಭಾನುವಾರ, ಏಪ್ರಿಲ್ 21, 2019
26 °C

ಮೇ 13ರಿಂದ ಕಬಡ್ಡಿ ಲೀಗ್‌

Published:
Updated:

ಬೆಂಗಳೂರು: ಇಂಟರ್‌ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್‌ ಮೇ 13ರಿಂದ ಜೂನ್‌ 4ರವರೆಗೆ ನಡೆಯಲಿದೆ. ಪುಣೆ, ಮೈಸೂರು ಮತ್ತು ಬೆಂಗಳೂರಿನಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿದೆ. 

ಐಪಿಕೆಎಲ್‌ನಲ್ಲಿ 16 ವಿದೇಶಿ ಮತ್ತು ಭಾರತದ 160 ಆಟಗಾರರು ಭಾಗವಹಿಸಲಿದ್ದು, 8 ತಂಡಗಳನ್ನು
ಪ್ರತಿನಿಧಿಸಲಿದ್ದಾರೆ. ಪುಣೆಯ ಬಾಲೆವಾಡಿ ಕ್ರೀಡಾಂಗಣದಲ್ಲಿ ಮೇ 13ರಿಂದ 21ವರೆಗೆ ಮೊದಲ ಹಂತದ 20 ಪಂದ್ಯಗಳು, ಮೇ 24ರಿಂದ 29ವರೆಗೆ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಎರಡನೇ ಹಂತದ 17 ಪಂದ್ಯಗಳು ನಡೆಯುತ್ತವೆ. ಜೂನ್‌ 4ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ಹಂತದ 7 ಪಂದ್ಯಗಳನ್ನು ಆಯೋಜಿಸಲಾಗಿದೆ. 

ಬೆಂಗಳೂರು ರೈನೋಸ್‌, ಚೆನ್ನೈ ಚಾಲೆಂಜರ್ಸ್, ದಿಲ್ಲರ್ಸ್ ಡೆಲ್ಲಿ, ತೆಲುಗು ಬುಲ್ಸ್, ಪುಣೆ ಪ್ರೈಡ್‌, ಹರಿಯಾಣ ಹೀರೋಸ್‌, ಮುಂಬೈ ಚೆ ರಾಜೇ ಹಾಗೂ ರಾಜಸ್ಥಾನ ರಜಪೂತ್‌ ತಂಡಗಳು ಸೆಣಸಲಿದ್ದು, ಡಿ–ಸ್ಪೋರ್ಟ್ ಟಿವಿಯಲ್ಲಿ ಪಂದ್ಯಗಳು ಪ್ರಸಾರವಾಗಲಿವೆ ಎಂದು ಪ್ರಕಟಣೆ ತಿಳಿಸಿದೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !