ಐಎಸ್‌ಎಲ್‌: ಡೆಲ್ಲಿಗೆ ನಿರಾಸೆ

7

ಐಎಸ್‌ಎಲ್‌: ಡೆಲ್ಲಿಗೆ ನಿರಾಸೆ

Published:
Updated:
Deccan Herald

ಗೋವಾ: ಇಂಡಿಯನ್‌ ಪ್ರೀಮಿಯರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಮೊದಲ ಜಯ ಸಾಧಿಸುವ ಡೆಲ್ಲಿ ಡೈನಾಮೋಸ್ ತಂಡದ ಆಸೆ ಇಲ್ಲೂ ಈಡೇರಲಿಲ್ಲ.

ಜವಾಹರಲಾಲ್ ನೆಹರು ಕ್ರಿಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದ 70ನೇ ನಿಮಿಷದ ವರೆಗೆ ಮುನ್ನಡೆ ಸಾಧಿಸಿ ಭರವಸೆಯಲ್ಲಿದ್ದ ಡೈನಾಮೋಸ್‌ ನಂತರ ನಿರಾಸೆಗೊಂಡಿತು. ಈ ತಂಡದ ಆಸೆಗೆ ಎಜು ಬೇಡಿಯಾ ಮತ್ತು ಬ್ರೆಂಡನ್ ಫರ್ನಾಂಡಸ್‌ ತಣ್ಣೀರು ಸುರಿದರು. ಪಂದ್ಯದಲ್ಲಿ ಗೋವಾ ಎಫ್‌ಸಿ ತಂಡ 3–2ರಿಂದ ಗೆದ್ದಿತು. ಎಜು ಬೇಡಿಯಾ (54 ಹಾಗೂ 89ನೇ ನಿಮಿಷ) ಮತ್ತು ಫರ್ನಾಂಡಿಸ್ (82ನೇ ನಿಮಿಷ) ತವರಿನ ಪ್ರೇಕ್ಷಕರ ಮುಂದೆ ಮಿಂಚಿದರು.

ಬ್ರಿಕ್ರಂ ಜೀತ್ ಸಿಂಗ್‌ (ಎಂಟನೇ ನಿಮಿಷ) ಮತ್ತು ಲಾಲ್ಯಂಗ್ಜುವಾ ಚಾಂಗ್ಟೆ (70ನೇ ನಿ) ಗಳಿಸಿದ ಗೋಲುಗಳ ಬೆಂಬಲದೊಂದಿಗೆ ಡೈನಾಮೊಸ್‌ ಭರ ವಸೆಯಲ್ಲಿತ್ತು. ಆದರೆ ದ್ವಿತೀಯಾರ್ಧದಲ್ಲಿ ಮೂರು ಗೋಲುಗಳನ್ನು ಗಳಿಸಿದ ಆತಿಥೇಯ ತಂಡ ಪಂದ್ಯ ಗೆದ್ದು ಸಂಭ್ರಮಿಸಿತು.

ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡದವರೂ ಜಿದ್ದಾಜಿದ್ದಿಯ ಹೋರಾಟದ ಮೂಲಕ ಫುಟ್‌ಬಾಲ್ ಪ್ರಿಯರನ್ನು ರಂಜಿಸಿದರು. ಎರಡೂ ತಂಡಗಳಿಗೆ ಗೋಲು ಗಳಿಸಲು ಸಾಕಷ್ಟು ಅವಕಾಶ ಇತ್ತು. ಆದರೆ ಡೆಲ್ಲಿ ಇದನ್ನು ಸದುಪಯೋಗ ಮಾಡಿಕೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !