ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌ ಟೂರ್ನಿ: ವಿಶ್ವನಾಥನ್‌ ಆನಂದ್‌ಗೆ ಜಯ

Last Updated 26 ಅಕ್ಟೋಬರ್ 2018, 18:24 IST
ಅಕ್ಷರ ಗಾತ್ರ

ಐಲ್‌ ಆಫ್ ಮ್ಯಾನ್‌: ಭಾರತದ ವಿಶ್ವನಾಥನ್ ಆನಂದ್‌ ಇಲ್ಲಿ ನಡೆಯುತ್ತಿರುವ ಐಲ್ ಆಫ್ ಮ್ಯಾನ್‌ ಅಂತರರಾಷ್ಟ್ರೀಯ ಚೆಸ್ ಟೂರ್ನಿಯಲ್ಲಿ ಶುಕ್ರವಾರ ಗೆಲುವು ಸಾಧಿಸಿದರು. ಜರ್ಮನಿಯ ಡ್ಯಾನಿಯೆಲ್‌ ಫ್ರಿಡ್‌ಮ್ಯಾನ್‌ ಅವರನ್ನು ಆನಂದ್‌ ಮಣಿಸಿದರು.

ಆದರೆ ಭಾರತದ ಮತ್ತೊಬ್ಬ ಭರವಸೆಯ ಆಟಗಾರ ಅಭಿಜಿತ್‌ ಗುಪ್ತಾ ಅಮೆರಿಕದ ಹಿಕಾರು ನಕಮುರು ಎದುರು ಸೋತರು.

ಗುರುವಾರದ ‍ಪಂದ್ಯದಲ್ಲಿ ಡ್ರಾ ಸಾಧಿಸಿ ಅಭಿಜಿತ್‌ ನಿರೀಕ್ಷೆ ಮೂಡಿಸಿದ್ದರು.

ಬಿ.ಅಧಿಬನ್‌ ಅಮೆರಿಕದ ಲೆವಾನ್‌ ಅರೋನಿಯನ್ ಜೊತೆ ಡ್ರಾ ಸಾಧಿಸಿ ಮುನ್ನಡೆ ಉಳಿಸಿಕೊಂಡರು. ಮೂರು ಸುತ್ತುಗಳು ಬಾಕಿ ಇರುವಂತೆಯೇ ಆರು ಆಟಗಾರರು ತಲಾ ಐದು ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT