ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್‌: ಜೈನ್‌ ತಂಡಕ್ಕೆ ಪ್ರಶಸ್ತಿ

Last Updated 9 ಜನವರಿ 2020, 15:23 IST
ಅಕ್ಷರ ಗಾತ್ರ

ಬೆಂಗಳೂರು: ಜೈನ್‌ ವಿಶ್ವವಿದ್ಯಾಲಯದ ಪುರುಷರ ಬ್ಯಾಸ್ಕೆಟ್‌ಬಾಲ್‌ ತಂಡದವರು ಮಹಾರಾಷ್ಟ್ರದ ನಾಂದೇಡ್‌ನಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಯಶವಂತ ಮಹಾವಿದ್ಯಾಲಯದಲ್ಲಿ ಆಯೋಜನೆಯಾಗಿದ್ದ ಫೈನಲ್‌ ಹಣಾಹಣಿಯಲ್ಲಿ ಬೆಂಗಳೂರಿನ ಜೈನ್‌ ವಿ.ವಿ.ತಂಡ 89–76 ಪಾಯಿಂಟ್ಸ್‌ನಿಂದ ಚೆನ್ನೈನ ಮದ್ರಾಸ್‌ ವಿಶ್ವವಿದ್ಯಾಲಯವನ್ನು ಪರಾಭವಗೊಳಿಸಿತು.

ಇದರೊಂದಿಗೆ 25 ವರ್ಷಗಳ ನಂತರ ಈ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ ಕರ್ನಾಟಕ ತಂಡ ಎಂಬ ಹಿರಿಮೆಗೆ ಭಾಜನವಾಯಿತು.

ಜೈನ್‌ ತಂಡದ ಅಭಿಷೇಕ್‌ ಗೌಡ ಮತ್ತು ಸಿ.ನಿಖಿಲ್‌ ಅವರು ಕ್ರಮವಾಗಿ 33 ಮತ್ತು 22 ಪಾಯಿಂಟ್ಸ್‌ ಕಲೆಹಾಕಿ ಮಿಂಚಿದರು.

ಮದ್ರಾಸ್‌ ತಂಡದ ಅರವಿಂದ್‌ (20) ಮತ್ತು ಸೂರ್ಯ (15) ಸೋಲಿನ ನಡುವೆಯೂ ಗಮನ ಸೆಳೆದರು.ಇದಕ್ಕೂ ಮೊದಲು ನಡೆದಿದ್ದ ಸೆಮಿಫೈನಲ್‌ನಲ್ಲಿ ಜೈನ್‌ ತಂಡ 72–69 ಪಾಯಿಂಟ್ಸ್‌ನಿಂದ ಪೂರ್ವಾಂಚಲದ ವಿ.ಬಿ.ಎಸ್‌.ವಿಶ್ವವಿದ್ಯಾಲಯ ತಂಡವನ್ನು ಸೋಲಿಸಿತ್ತು.

ವಿಜಯೀ ತಂಡದ ಅಭಿಷೇಕ್‌ ಗೌಡ ಮತ್ತು ಸೌಕಿನ್‌ ಶೆಟ್ಟಿ ಅವರು ಕ್ರಮವಾಗಿ 25 ಮತ್ತು 27 ಪಾಯಿಂಟ್ಸ್‌ ಗಳಿಸಿದ್ದರು. ಚಾಂಪಿಯನ್‌ಷಿಪ್‌ನಲ್ಲಿ ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ವಲಯಗಳ 16 ತಂಡಗಳು ಭಾಗವಹಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT