ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜು: ಜೈನ್‌ ವಿಶ್ವವಿದ್ಯಾಲಯಕ್ಕೆ ಸಮಗ್ರ ಪ್ರಶಸ್ತಿ

Last Updated 1 ನವೆಂಬರ್ 2018, 16:07 IST
ಅಕ್ಷರ ಗಾತ್ರ

ಬೆಂಗಳೂರು: ಜೈನ್‌ ವಿಶ್ವವಿದ್ಯಾಲಯ ತಂಡದವರು ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಈಜು ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಜಯಿಸಿದ್ದಾರೆ.

ಜೈನ್‌ ತಂಡದವರು ಒಟ್ಟು 64 ಪಾಯಿಂಟ್ಸ್‌ ಗಳಿಸಿ ಈ ಸಾಧನೆ ಮಾಡಿದ್ದಾರೆ. ದೆಹಲಿ ವಿಶ್ವವಿದ್ಯಾಲಯ (36 ಪಾಯಿಂಟ್ಸ್‌) ರನ್ನರ್ಸ್‌ ಅಪ್‌ ಆಗಿದೆ. ಚಂಡಿಗಡದ ಪಂಜಾಬ್‌ ವಿಶ್ವವಿದ್ಯಾಲಯ ಎರಡನೇ ರನ್ನರ್ಸ್‌ ಅಪ್‌ ಸ್ಥಾನ ಗಳಿಸಿದೆ. ಈ ತಂಡ 30 ಪಾಯಿಂಟ್ಸ್‌ ಸಂಗ್ರಹಿಸಿದೆ.

ಗುರುವಾರ ನಡೆದ 4X400 ಮೀಟರ್ಸ್‌ ಮೆಡ್ಲೆ ವಿಭಾಗದಲ್ಲಿ ಜೈನ್‌ ವಿಶ್ವವಿದ್ಯಾಲಯ ಕೂಟ ದಾಖಲೆ ನಿರ್ಮಿಸಿತು. ಎಸ್‌.ಪಿ.ಲಿಖಿತ್‌, ಎಸ್‌.ಶಿವ, ರಕ್ಷಿತ್‌ ಶೆಟ್ಟಿ ಮತ್ತು ಎಂ.ರಾಹುಲ್‌ ಅವರಿದ್ದ ತಂಡ 3 ನಿಮಿಷ 57.25 ಸೆಕೆಂಡುಗಳಲ್ಲಿ ಗುರಿ ಮುಟ್ಟಿತು.

ದೆಹಲಿ ವಿಶ್ವವಿದ್ಯಾಲಯ (3:57.50ಸೆ.) ಮತ್ತು ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯ (4:01.56ಸೆ.) ಕ್ರಮವಾಗಿ ಈ ವಿಭಾಗದ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದವು.

ಜೈನ್‌ ವಿಶ್ವವಿದ್ಯಾಲಯದ ಎಸ್‌.ಪಿ.ಲಿಖಿತ್‌, ಶ್ರೇಷ್ಠ ಈಜುಪಟು ಗೌರವ ಪಡೆದರು.

ಗುರುವಾರದ ಫಲಿತಾಂಶಗಳು: 200 ಮೀಟರ್ಸ್‌ ಬಟರ್‌ಫ್ಲೈ: ವಿನಾಯಕ್‌ (ದೆಹಲಿ ವಿ.ವಿ: 2 ನಿಮಿಷ, 09.63ಸೆ.)–1, ಅವಿನಾಶ್‌ ಮಣಿ (ವಿಟಿಯು, ಬೆಳಗಾವಿ: 2:10.21)–2, ಸೇಲರ್‌ ಭಾರ್ಗವ್‌ ಚಿರಾಗ್‌ (ವೀರ್‌ ನರ್ಮದಾ ಸೌತ್‌ ಗುಜರಾತ್‌ ವಿ.ವಿ: 2:14.18ಸೆ.)–3.

50 ಮೀ. ಬ್ರೆಸ್ಟ್‌ಸ್ಟ್ರೋಕ್‌: ಎಸ್‌.ಪಿ.ಲಿಖಿತ್‌ (ಜೈನ್‌: 29.47ಸೆ.)–1, ಅನ್ಸ್‌ ಅರೋರ (ದೆಹಲಿ ವಿ.ವಿ: 30.15ಸೆ.)–2, ಹರನಿಮ್ರತ್‌ ಎಸ್‌.ಭಿಂಡರ್‌ (ಪಂಜಾಬ್‌ ವಿ.ವಿ. ಪಟಿಯಾಲ: 30.15)–3.

100 ಮೀ.ಫ್ರೀಸ್ಟೈಲ್‌: ಸಾಹಿಲ್‌ ಚೋಪ್ರಾ (ಪಂಜಾಬ್‌ ವಿ.ವಿ. ಚಂಡಿಗಡ: 53.08ಸೆ.)–1, ಎಂ.ಎಸ್‌.ಪವನ್‌ ಗುಪ್ತಾ (ಅಣ್ಣಾ ವಿ.ವಿ, ಚೆನ್ನೈ: 53.60ಸೆ.)–2, ಮಾಣಿಕ್‌ ಸೋನಿ (ಗುರುನಾನಕ್‌ ದೇವ್‌ ವಿ.ವಿ, ಅಮೃತಸರ: 54.52ಸೆ.)–3.

100 ಮೀ. ಬ್ಯಾಕ್‌ಸ್ಟ್ರೋಕ್‌: ಟಿ.ಸೇತು ಮಾಣಿಕ್‌ವೇಲ್‌ (ಮನೋನ್ಮಣಿಯನ್ ಸುಂದರನಾರ್‌ ವಿ.ವಿ: 58.67ಸೆ.)–1, ಸಿದ್ಧಾಂತ್‌ ಸೆಜ್ವಾಲ್‌ (ಪಂಜಾಬ್‌ ವಿ.ವಿ, ಚಂಡಿಗಡ: 58.54ಸೆ.)–2, ರಕ್ಷಿತ್‌ ಶೆಟ್ಟಿ (ಜೈನ್: 59.37ಸೆ.)–3.

1 ಮೀಟರ್ಸ್‌ ಸ್ಪ್ರಿಂಗ್‌ ಬೋರ್ಡ್‌: ವರುಣ್‌ ಪೈ (ವಿಟಿಯು, ಬೆಳಗಾವಿ: 170.85 ಪಾಯಿಂಟ್ಸ್‌)–2.

3 ಮೀ.ಸ್ಪ್ರಿಂಗ್ ಬೋರ್ಡ್‌: ವರುಣ್‌ ಪೈ (ವಿಟಿಯು, ಬೆಳಗಾವಿ: 172.1 ಪಾ.)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT