ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಬರೆದ ಜೈನ್‌ ವಿಶ್ವವಿದ್ಯಾಲಯದ ತಂಡ

ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಈಜು ಚಾಂಪಿಯನ್‌ಷಿಪ್‌
Last Updated 28 ಅಕ್ಟೋಬರ್ 2018, 18:37 IST
ಅಕ್ಷರ ಗಾತ್ರ

ಬೆಂಗಳೂರು: ಆತಿಥೇಯ ಜೈನ್ ವಿಶ್ವವಿದ್ಯಾಲಯ ತಂಡದವರು ಅಖಿಲ ಭಾರತ ಅಂತರ ವಿವಿ ಪುರುಷ ಈಜು ಚಾಂಪಿಯನ್‌ಷಿಪ್‌ನ 4x200 ಮೀಟರ್ಸ್‌ ಫ್ರೀಸ್ಟೈಲ್‌ ರಿಲೆಯಲ್ಲಿ ದಾಖಲೆ ಬರೆದರು. ಕನಕಪುರದ ಜೈನ್ ಅಂತರರಾಷ್ಟ್ರೀಯ ರೆಸಿಡೆನ್ಶಿಯಲ್‌ ಶಾಲೆ ಆವರಣದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಆತಿಥೇಯ ತಂಡ 8 ನಿಮಿಷ 9.79 ಸೆಕೆಂಡುಗಳಲ್ಲಿ ಗುರಿ ಮುಟ್ಟಿತು.

ತಂಡದಲ್ಲಿ ಎಸ್‌.ಶಿವ, ಎಂ.ಪೃಥ್ವಿ, ಪಿ.ಚಂದ್ರು ಮತ್ತು ಎಂ.ರಾಹುಲ್ ಇದ್ದರು. ಚಂಡೀಗಢದ ಪಂಜಾಬ್‌ ವಿವಿ ದ್ವಿತೀಯ ಮತ್ತು ದೆಹಲಿ ವಿಶ್ವವಿದ್ಯಾಲಯ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿತು.

ಫಲಿತಾಂಶಗಳು

50 ಮೀಟರ್ಸ್ ಬ್ಯಾಕ್‌ಸ್ಟ್ರೋಕ್‌: ಸಿದ್ಧಾಂತ್‌ ಸೇಜ್ವಾಲ್‌ (ಪಂಜಾಬ್‌ ವಿವಿ)–1. ಕಾಲ: 27.14 ಸೆಕೆಂಡು, ರಕ್ಷಿತ್‌ ಯು.ಶೆಟ್ಟಿ (ಜೈನ್ ವಿವಿ)–2, ವೇದಾಂತ್ ಸೇಠ್‌ (ದೆಹಲಿ ವಿವಿ)–3;

100 ಮೀ ಬಟರ್‌ಫ್ಲೈ: ಆಂಬ್ರೆ ಮಿಹಿರ್‌ (ಸಾವಿತ್ರಿ ಬಾಯಿ ಫುಲೆ ವಿವಿ ಪುಣೆ)–1. ಕಾಲ: 56.50 ಸೆ, ಅವಿನಾಶ್‌ ಮಣಿ (ವಿಟಿಯು ಬೆಳಗಾವಿ)–2, ರಕ್ಷಿತ್ ಶೆಟ್ಟಿ (ಜೈನ್ ವಿವಿ)–3;

200 ಮೀ ಬ್ರೆಸ್ಟ್‌ ಸ್ಟ್ರೋಕ್‌: ಎಸ್‌.ಧನುಷ್‌ (ಅಣ್ಣಾ ವಿವಿ, ಚೆನ್ನೈ)–1. ಕಾಲ: 2ನಿ,20.31 ಸೆ (ಕೂಟ ದಾಖಲೆ), ಲಿಖಿತ್ ಎಸ್‌.ಪಿ (ಜೈನ್ ವಿವಿ)–2, ಸುನೀತ್ ಎಸ್‌ (ಕೇರಳ ವಿವಿ)–3;

400 ಮೀ ಫ್ರೀಸ್ಟೈಲ್‌: ಕುಶಾಗ್ರ ರಾವತ್‌ (ದೆಹಲಿ ವಿವಿ)–1. ಕಾಲ: 4ನಿ, 04.78 ಸೆ, ಅವಿನಾಶ್ ಮಣಿ (ವಿಟಿಯು ಬೆಳಗಾವಿ)–2, ಸುಶ್ರುತ್ ಕಾಪಸೆ (ಮುಂಬೈ ವಿವಿ)–3;

4x200 ಮೀ ಫ್ರೀಸ್ಟೈಲ್‌ ರಿಲೆ: ಜೈನ್‌ ವಿವಿ–1. ಕಾಲ: 8 ನಿ 09.79 ಸೆ, ಪಂಜಾಬ್‌ ವಿವಿ–2, ದೆಹಲಿ ವಿವಿ–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT