ಸ್ಪೇನ್‌ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌: ಕ್ವಾರ್ಟರ್‌ನಲ್ಲಿ ಸೋತ ಜಯರಾಮ್‌

7

ಸ್ಪೇನ್‌ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌: ಕ್ವಾರ್ಟರ್‌ನಲ್ಲಿ ಸೋತ ಜಯರಾಮ್‌

Published:
Updated:
Deccan Herald

ಬಾರ್ಸಿಲೋನಾ : ಭಾರತದ ಅಜಯ್‌ ಜಯರಾಮ್‌ ಅವರು ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಸೂಪರ್‌ 300 ಬಾರ್ಸಿಲೋನಾ ಸ್ಪೇನ್‌ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ನಿರಾಸೆ ಕಂಡಿದ್ದಾರೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಅಜಯ್‌ 21–13, 13–21, 11–21ರಲ್ಲಿ ಡೆನ್ಮಾರ್ಕ್‌ನ ರಾಸ್‌ಮಸ್‌ ಗೆಮ್ಕೆ ಎದುರು ಪರಾಭವಗೊಂಡರು.ಈ ಹೋರಾಟ 54 ನಿಮಿಷ ನಡೆಯಿತು.

ಮೊದಲ ಗೇಮ್‌ನಲ್ಲಿ ಭಾರತದ ಆಟಗಾರ ಅಬ್ಬರಿಸಿದರು. ಚುರುಕಿನ ಸರ್ವ್‌ ಮತ್ತು ಆಕರ್ಷಕ ಡ್ರಾಪ್‌ಗಳ ಮೂಲಕ ಪಾಯಿಂಟ್ಸ್‌ ಬುಟ್ಟಿಗೆ ಹಾಕಿಕೊಂಡು ಮುನ್ನಡೆ ಗಳಿಸಿದರು. ಇದರಿಂದ ವಿಚಲಿತರಾದಂತೆ ಕಂಡ ಗೆಮ್ಕೆ ಹಲವು ತಪ್ಪುಗಳನ್ನು ಮಾಡಿ ಗೇಮ್‌ ಕೈಚೆಲ್ಲಿದರು.

ಆರಂಭಿಕ ನಿರಾಸೆಯಿಂದ ಎದೆಗುಂದದ ಡೆನ್ಮಾರ್ಕ್‌ನ ಆಟಗಾರ ಗೆಮ್ಕೆ ಎರಡನೇ ಗೇಮ್‌ನಲ್ಲಿ ಮೋಡಿ ಮಾಡಿದರು. ದೀರ್ಘ ರ‍್ಯಾಲಿಗಳನ್ನು ಆಡಿದ ಅವರು ಭಾರತದ ಆಟಗಾರನನ್ನು ಕಂಗೆಡಿಸಿದರು.

ಮೂರನೇ ಗೇಮ್‌ನಲ್ಲೂ ಗೆಮ್ಕೆ ಆಟ ರಂಗೇರಿತು. ಬೇಸ್‌ಲೈನ್‌ ಹೊಡೆತಗಳ ಮೂಲಕ ಪಾಯಿಂಟ್ಸ್‌ ಗಳಿಸಿದ ಅವರು ಮುನ್ನಡೆ ಗಳಿಸಿದರು. ವಿರಾಮದವರೆಗೂ ಎದುರಾಳಿಗೆ ದಿಟ್ಟ ಪೈಪೋಟಿ ನೀಡಿದ ಜಯರಾಮ್‌ ನಂತರ ಮಂಕಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !