ಈಜು: ಜೆಡಿಡಾ, ಶಾಲಿನಿ ಮಿಂಚು

ಬೆಂಗಳೂರು: ಕರ್ನಾಟಕದ ಜೆಡಿಡಾ ಅಜಿತ್ ಅವರು ಖೇಲೊ ಇಂಡಿಯಾ ಮಹಿಳೆಯರ ಸರಣಿ ಈಜು ಕೂಟದಲ್ಲಿ ಮತ್ತೆ ಮಿಂಚಿದರು.
ಇಲ್ಲಿ ಮುಕ್ತಾಯವಾದ ಕೂಟದಲ್ಲಿ ಭಾನುವಾರ ಅವರು ತಲಾ ಒಂದು ಚಿನ್ನ ಮತ್ತು ಬೆಳ್ಳಿ ಪದಕ ಜಯಿಸಿದರು. ಮಹಿಳೆಯರ 200 ಮೀ. ಬಟರ್ಫ್ಲೈನಲ್ಲಿ (2 ನಿಮಿಷ. 27. 98 ಸೆಕೆಂಡು) ಅಗ್ರಸ್ಥಾನ ಗಳಿಸಿದರೆ, 100 ಮೀ. ಫ್ರೀಸ್ಟೈಲ್ (1 ನಿ. 2.13ಸೆ.) ಬೆಳ್ಳಿ ಜಯಿಸಿದರು.
ಶಾಲಿನಿ ಆರ್. ದೀಕ್ಷಿತ್, ತನಿಷಾ ಗುಪ್ತಾ, ಅಸ್ಮಿತಾ ಚಂದ್ರ ಕೂಡ ಚಿನ್ನದ ಪದಕದ ಸಾಧನೆ
ಮಾಡಿದರು.
ಫಲಿತಾಂಶಗಳು: ಮಹಿಳೆಯರು: 400 ಮೀ. ಫ್ರೀಸ್ಟೈಲ್: ಅಸ್ಮಿತಾ ಚಂದ್ರ (4 ನಿ. 44.10 ಸೆಕೆಂಡು)–1, ಅನುಮತಿ ಅನಿಲ್ ಚೌಗುಲೆ–2, ಅನ್ವಯಿ ಎಸ್. ಮಸ್ಕೆ–3 (ಮೂವರು ಕರ್ನಾಟಕದವರು). 200 ಮೀ. ಬಟರ್ಫ್ಲೈ: ಜೆಡಿಡಾ ಅಜಿತ್ (2ನಿ.27.98ಸೆ.)–1, ತಿತೀಕ್ಷಾ ಹನುಮಂತರಾಜು–2, ಅನ್ನಾ ಸ್ಫೂರ್ತಿ ತೆರೇಸಾ–3 (ಎಲ್ಲರೂ ಕರ್ನಾಟಕ). 200 ಮೀ. ಬ್ಯಾಕ್ಸ್ಟ್ರೋಕ್: ಶ್ರೇಯಾ ಮೇರಿ ಕಮಲ್ (ಕೇರಳ, 2 ನಿ. 34.79 ಸೆ)–1, ನೈಶಾ ಶೆಟ್ಟಿ–2, ಹಿತಾಶ್ರೀ ನಾಗರಾಜ–3 (ಇಬ್ಬರೂ ಕರ್ನಾಟಕ). 100 ಮೀ. ಬ್ರೆಸ್ಟ್ಸ್ಟ್ರೋಕ್: ಎಸ್.ಲಕ್ಷ್ಯಾ ಶಿವಾನಂದ (1 ನಿ. 19.29ಸೆ)–1, ಹಿತೈಷಿ ವಿ.–2, ಮೇಘಾಂಜಲಿ ಬಿರಾದಾರ–3 (ಮೂವರೂ ಕರ್ನಾಟಕ). 100 ಮೀ. ಫ್ರೀಸ್ಟೈಲ್: ಲೇತಿಶಾ ಮಂದಣ್ಣ (1 ನಿ.0.73 ಸೆ.)–1, ಜೆಡಿಡಾ ಅಜಿತ್–2, ಅಸ್ಮಿತಾ ಚಂದ್ರ–3 (ಮೂವರೂ ಕರ್ನಾಟಕ).
ಬಾಲಕಿಯರು: 400 ಮೀ. ಫ್ರೀಸ್ಟೈಲ್: ಶಿರಿನ್ (4 ನಿ.41.90 ಸೆ.)–1, ಅದಿತಿ ಮುಲಾಯ್–2, ರುಜುಲಾ ಶಶಿಧರ್–3 (ಎಲ್ಲರೂ ಕರ್ನಾಟಕ). 200 ಮೀ. ಬಟರ್ಫ್ಲೈ: ತನಿಶಿ ಗುಪ್ತಾ (2 ನಿ.30.24ಸೆ.)–1, ರಿತಿಕಾ ಮಹೇಶ್ ಬೆಂಗಳೂರು–2, ಸಭಾ ಸುಹಾನಾ–3 (ಮೂವರೂ ಕರ್ನಾಟಕ). 200 ಮೀ. ಬ್ಯಾಕ್ಸ್ಟ್ರೋಕ್: ಶಾಲಿನಿ ಆರ್. ದೀಕ್ಷಿತ್ (2 ನಿ. 32.65 ಸೆ.)–1, ಅಂಬರ್ ಜೆ. ಸಿಂಗ್–2, ಮೀನಾಕ್ಷಿ ಮೆನನ್–3 (ಮೂವರು ಕರ್ನಾಟಕ). 100 ಮೀ. ಬ್ರೆಸ್ಟ್ಸ್ಟ್ರೋಕ್: ಲಿನೇಶಾ ಅನಿಲ್ಕುಮಾರ್ (1 ನಿ. 17.02ಸೆ.)–1, ವಿಹಿತಾ ನಯನಾ–2, ರಿಯಾನಾ ಫರ್ನಾಂಡೀಸ್–3 (ಮೂವರೂ ಕರ್ನಾಟಕ). 100 ಮೀ. ಫ್ರೀಸ್ಟೈಲ್: ರುಜುಲಾ ಶಶಿಧರ್ (1 ನಿ. 1.48ಸೆ.)–1, ಧೀನಿಧಿ ದೇಸಿಂಗು–2, ಆರ್ನಾ ಎಂ.ಪಿ.–3 (ಮೂವರು ಕರ್ನಾಟಕ).
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.