ಸುಲ್ತಾನ್ ಜೋಹರ್‌ ಕಪ್‌ ಹಾಕಿ: ಭಾರತಕ್ಕೆ ಜಯ

7

ಸುಲ್ತಾನ್ ಜೋಹರ್‌ ಕಪ್‌ ಹಾಕಿ: ಭಾರತಕ್ಕೆ ಜಯ

Published:
Updated:

ಜೋಹರ್‌ ಬಹ್ರು, ಮಲೇಷ್ಯಾ: ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಗೋಲು ಗಳಿಸಿದ ನಾಯಕ ಮನದೀಪ್‌ ಮೋರ್‌, ಸುಲ್ತಾನ್‌ ಜೋಹರ್‌ ಕಪ್‌ ಜೂನಿಯರ್‌ ಹಾಕಿ ಟೂರ್ನಿಯ ಪಂದ್ಯದಲ್ಲಿ ಭಾರತಕ್ಕೆ ಜಯದ ಸಿಹಿ ಉಣಬಡಿಸಿದರು.

ಮಂಗಳವಾರ ನಡೆದ ಹಣಾಹಣಿಯಲ್ಲಿ ಭಾರತ 1–0 ಗೋಲಿನಿಂದ ಜಪಾನ್‌ ತಂಡವನ್ನು ಪರಾಭವಗೊಳಿಸಿತು. ಇದರೊಂದಿಗೆ ಟೂರ್ನಿಯಲ್ಲಿ ಗೆಲುವಿನ ‘ಹ್ಯಾಟ್ರಿಕ್‌’ ಸಾಧನೆ ಮಾಡಿತು. 

ಮಳೆಯ ಕಾರಣ ತಡವಾಗಿ ಆರಂಭವಾದ ಪಂದ್ಯದಲ್ಲಿ ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ಸಮಬಲದ ಪೈಪೋಟಿ ಕಂಡುಬಂತು. ಮೂರನೇ ಕ್ವಾರ್ಟರ್‌ನಲ್ಲಿ ಭಾರತ ಆಕ್ರಮಣಕಾರಿ ಆಟಕ್ಕೆ ಅಣಿಯಾಯಿತು. 42ನೇ ನಿಮಿಷದಲ್ಲಿ ಮನದೀಪ್‌ ಚೆಂಡನ್ನು ಗುರಿ ಮುಟ್ಟಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !