ಸ್ಕ್ವಾಷ್‌: ಎಂಟರ ಘಟ್ಟಕ್ಕೆ ಜೋಷ್ನಾ

ಶುಕ್ರವಾರ, ಮಾರ್ಚ್ 22, 2019
26 °C

ಸ್ಕ್ವಾಷ್‌: ಎಂಟರ ಘಟ್ಟಕ್ಕೆ ಜೋಷ್ನಾ

Published:
Updated:
Prajavani

ಕೈರೊ: ಭಾರತದ ಜೋಷ್ನಾ ಚಿಣ್ಣಪ್ಪ, ಮಹಿಳಾ ಬ್ಲಾಕ್‌ ಬಾಲ್‌ ಸ್ಕ್ವಾಷ್‌ ಓಪನ್‌ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸಿದ್ದಾರೆ.

ಸಿಂಗಲ್ಸ್‌ ವಿಭಾಗದಲ್ಲಿ ಕಣದಲ್ಲಿರುವ ಭಾರತದ ಆಟಗಾರ್ತಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಮಂಗಳವಾರ ರಾತ್ರಿ ನಡೆದ ಪ್ರೀ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಜೋಷ್ನಾ 11–4, 6–11, 14–12, 11–9ರಲ್ಲಿ ಆರನೇ ಶ್ರೇಯಾಂಕದ ಆಟಗಾರ್ತಿ ಸಾರಾ ಜೇನ್‌ ಪೆರ್ರಿ ಅವರನ್ನು ಪರಾಭವಗೊಳಿಸಿದರು.

ಈ ಮೂಲಕ ಏಳು ವರ್ಷಗಳ ಹಿಂದೆ ಎದುರಾಗಿದ್ದ ಸೋಲಿಗೆ ಮುಯ್ಯಿ ತೀರಿಸಿಕೊಂಡರು. 2012ರ ಚೆನ್ನೈ ಓಪನ್‌ನಲ್ಲಿ ಉಭಯ ಆಟಗಾರ್ತಿಯರು ಎದುರಾಗಿದ್ದಾಗ ಸಾರಾ ಗೆಲುವಿನ ತೋರಣ ಕಟ್ಟಿದ್ದರು.

ಮೊದಲ ಸುತ್ತಿನಲ್ಲಿ ಮಲೇಷ್ಯಾದ ನಿಕೊಲಾ ಡೇವಿಡ್‌ಗೆ ಆಘಾತ ನೀಡಿದ್ದ ಜೋಷ್ನಾ, ಇಂಗ್ಲೆಂಡ್‌ನ ಆಟಗಾರ್ತಿ ಸಾರಾ ವಿರುದ್ಧವೂ ಮೋಡಿ ಮಾಡಿದರು.

ಮೊದಲ ಗೇಮ್‌ನಲ್ಲಿ ಭಾರತದ ಆಟಗಾರ್ತಿ ಮಿಂಚಿದರು. ಚುರುಕಿನ ಡ್ರಾಪ್‌ ಮತ್ತು ಆಕರ್ಷಕ ರಿಟರ್ನ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿ ಗೇಮ್‌ ಕೈವಶ ಮಾಡಿಕೊಂಡರು.

ಎರಡನೇ ಗೇಮ್‌ನಲ್ಲಿ ಸಾರಾ ತಿರುಗೇಟು ನೀಡಿದ್ದರಿಂದ 2–2 ಸಮಬಲ ಕಂಡುಬಂತು. ಇದರಿಂದ ಭಾರತದ ಆಟಗಾರ್ತಿ ವಿಶ್ವಾಸ ಕಳೆದುಕೊಳ್ಳಲಿಲ್ಲ. ಮೂರನೇ ಗೇಮ್‌ನಲ್ಲಿ ಇನ್ನಷ್ಟು ಆಕ್ರಮಣಕಾರಿ ಆಟ ಆಡಿ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದ ಅವರು 2–1 ಮುನ್ನಡೆ ಪಡೆದರು.

ನಿರ್ಣಾಯಕ ಎನಿಸಿದ್ದ ನಾಲ್ಕನೇ ಗೇಮ್‌ನಲ್ಲೂ ಜೋಷ್ನಾ ಪರಿಣಾಮಕಾರಿ ಆಟ ಆಡಿ ಸಂಭ್ರಮಿಸಿದರು.

ಎಂಟರ ಘಟ್ಟದ ಪೈಪೋಟಿಯಲ್ಲಿ ಜೋಷ್ನಾ, ನ್ಯೂಜಿಲೆಂಡ್‌ನ ಆಟಗಾರ್ತಿ, ಟೂರ್ನಿಯಲ್ಲಿ ಮೂರನೇ ಶ್ರೇಯಾಂಕ ಹೊಂದಿರುವ ಜೊಯೆಲ್‌ ಕಿಂಗ್‌ ಎದುರು ಸೆಣಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !