ಭಾನುವಾರ, ಡಿಸೆಂಬರ್ 15, 2019
23 °C

10 ಕಿಮೀ ಓಟ: ಜೋಶುವಾ ವಿಶ್ವ ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವೆಲೆನ್ಸಿಯಾ, ಸ್ಪೇನ್: ಉಗಾಂಡದ ಜೋಶುವಾ ಚೆಪ್ಟೆಗಿ, 10 ಕಿಲೊಮೀಟರ್ಸ್ ಓಟದಲ್ಲಿ ಭಾನುವಾರ ವಿಶ್ವ ದಾಖಲೆ ಬರೆದರು. 26 ನಿಮಿಷ, 38 ಸೆಕೆಂಡುಗಳನ್ನು ಗುರಿ ತಲುಪಿದ ಅವರು ಕೆನ್ಯಾದ ಲಿಯೊನಾರ್ಡ್ ಕೊಮೊನ್ 2010ರಲ್ಲಿ ಮಾಡಿದ ದಾಖಲೆಯನ್ನು ಕೇವಲ ಆರು ಸೆಕೆಂಡುಗಳ ಅಂತರದಲ್ಲಿ ಹಿಂದಿಕ್ಕಿದರು.

10 ಕಿಲೊಮೀಟರ್ಸ್ ಓಟದಲ್ಲಿ ಹಾಲಿ ವಿಶ್ವ ಚಾಂಪಿಯನ್ ಆಗಿರುವ ಜೋಶುವಾ ಈ ವರ್ಷದ ಆರಂಭದಲ್ಲಿ ಡೆನ್ಮಾರ್ಕ್‌ನಲ್ಲಿ ನಡೆದಿದ್ದ ಅಂತರರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್‌ನ ವಿಶ್ವ ಕ್ರಾಸ್ ಕಂಟ್ರಿ ಚಾಂಪಿಯನ್‌ಷಿಪ್‌ನಲ್ಲೂ ಮೊದಲಿಗರಾಗಿದ್ದರು.

13 ನಿಮಿಷ 23 ಸೆಕೆಂಡುಗಳಲ್ಲಿ ಅರ್ಧ ಹಾದಿಯನ್ನು ಕ್ರಮಿಸಿದ ಅವರು ಕೊನೆಯಲ್ಲಿ ಅಮೋಘ ಓಟದ ಮೂಲಕ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡರು.

‌‘ನನ್ನ ಪಾಲಿಗೆ ಇದು ಅದೃಷ್ಟದ ವರ್ಷ. ಇಂಥ ಸಾಧನೆ ಮಾಡಲು ಆಗುತ್ತದೆ ಎಂದು ಕನಸಿನಲ್ಲೂ ನೆನೆಸಿರಲಿಲ್ಲ. ಇಲ್ಲಿನ ಹವಾಗುಣಕ್ಕೆ ಹೊಂದಿಕೊಳ್ಳಲು ಸಾಕಷ್ಟು ತಯಾರಿ ಅಗತ್ಯ ಇತ್ತು. ಅದನ್ನು ಮಾಡಿಕೊಂಡೇ ಬಂದಿದ್ದೆ. ಇದು ಫಲ ನೀಡಿತು’ ಎಂದು 23 ವರ್ಷದ ಜೋಶುವಾ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು