ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನಿಯರ್ ಹಾಕಿ ವಿಶ್ವಕಪ್: ಎಂಟರ ಘಟ್ಟಕ್ಕೆ ಭಾರತ ಲಗ್ಗೆ

ಜೂನಿಯರ್ ಹಾಕಿ ವಿಶ್ವಕಪ್: ಸಂಜಯ, ಹುಂಡಾಲ, ಸುದೀಪ್ ಮಿಂಚು
Last Updated 27 ನವೆಂಬರ್ 2021, 20:49 IST
ಅಕ್ಷರ ಗಾತ್ರ

ಭುವನೇಶ್ವರ್: ಹಾಲಿ ಚಾಂಪಿಯನ್ ಭಾರತ ತಂಡವು ಎಫ್‌ಐಎಚ್ ಜೂನಿಯರ್ ಪುರುಷರ ಹಾಕಿ ವಿಶ್ವಕಪ್ ಟೂರ್ನಿಯ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿತು.

ಶನಿವಾರ ಇಲ್ಲಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ಆತಿಥೇಯ ಭಾರತ ತಂಡವು 8–2ರಿಂದ ಪೋಲೆಂಡ್ ವಿರುದ್ಧ ಜಯಭೇರಿ ಬಾರಿಸಿತು. ಗುಂಪು ಹಂತದ ಮೊದಲ ಪಂದ್ಯದಲ್ಲಿ ಭಾರತವು 4–5ರಿಂದ ಫ್ರಾನ್ಸ್‌ ವಿರುದ್ಧ ಆಘಾತ ಅನುಭವಿಸಿತ್ತು. ಎರಡನೇ ಪಂದ್ಯದಲ್ಲಿ 13–1ರಿಂದ ಕೆನಡಾ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು.

ಇದೀಗ ಮೂರನೇ ಹಣಾಹಣಿಯಲ್ಲಿ ತಂಡದ ಉಪನಾಯಕ ಸಂಜಯಕುಮಾರ್ (4ನಿ, 58ನಿ), ಅರೈಜಿತ್ ಸಿಂಗ್ ಹುಂಡಾಲ (8ನಿ,60ನಿ) ಮತ್ತು ಸುದೀಪ್ ಚಿಮಾಕೊ (24ನಿ, 40ನಿ) ಅವರು ತಲಾ ಎರಡು ಗೋಲು ಗಳಿಸಿ ತಂಡದ ಗೆಲುವಿಗೆ ಮಹತ್ವದ ಕಾಣಿಕೆ ನೀಡಿದರು.

ಉತ್ತಮ್ ಸಿಂಗ್ (34ನೇ ನಿ) ಮತ್ತು ಶ್ರದ್ಧಾನಂದ ತಿವಾರಿ (38ನಿ) ಕೂಡ ತಂಡದ ಗೋಲು ಗಳಿಕೆ ಹೆಚ್ಚಲು ತಮ್ಮ ಕಾಣಿಕೆ ನೀಡಿದರು. ಪಂದ್ಯದ ಆರಂಭದಿಂದಲೇ ಆಕ್ರಮಣಶೀಲ ಆಟವಾಡಿದ ತಂಡವು ಮೇಲುಗೈ ಸಾಧಿಸಿತು.

ಮೊದಲ ಮೂರು ಕ್ವಾರ್ಟರ್‌ಗಳಲ್ಲಿ ಭಾರತದ ಆಟಗಾರರು ಪ್ರಾಬಲ್ಯ ಮೆರೆದರು. ಕೊನೆಯ ಕ್ವಾರ್ಟರ್‌ನಲ್ಲಿ ಪ್ರತಿ ಹೋರಾಟ ತೋರಿದ ಪೋಲೆಂಡ್ ತಂಡವು ಎರಡು ಗೋಲು ಗಳಿಸುವಲ್ಲಿ ಯಶಸ್ವಿಯಾಯಿತು. ವೋಸಿಚ್ ರುಕೊವಸ್ಕಿ (50ನಿ) ಮತ್ತು ರಾಬರ್ಟ್ ಪಾವ್ಲಾಕ್ (54ನಿ) ಗೋಲು ಗಳಿಸಿದರು.

ಡಿಸೆಂಬರ್ 1ರಂದು ನಡೆಯಲಿರುವ ಕ್ವಾರ್ಟರ್‌ಫೈನಲ್‌ನಲ್ಲಿ ಹೋದ ಸಲದ ರನ್ನರ್ಸ್ ಅಪ್ ಬೆಲ್ಜಿಯಂ ತಂಡವನ್ನು ಭಾರತವು ಎದುರಿಸಲಿದೆ.

ಬೆಲ್ಜಿಯಂ ತಂಡವು ಎ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿ ಎಂಟರ ಘಟ್ಟಕ್ಕೆ ಪ್ರವೇಶಿಸಿದೆ.

ಡಿ ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ 3–1ರಿಂದ ಈಜಿಪ್ತ್ ಎದುರು ಗೆದ್ದಿತು.

ಮನಮುಟ್ಟಿದ ಮನಪ್ರೀತ್ ಮಾತು: ಬಿ ಗುಂಪಿನ ಮೊದಲ ಪಂದ್ಯದಲ್ಲಿ ಆಘಾತ ಅನುಭವಿಸಿದ್ದ ಭಾರತ ತಂಡಕ್ಕೆ ಸೀನಿಯರ್ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಅವರು ನೀಡಿದ ಸಲಹೆಗಳು ಪ್ರೇರಣಾದಾಯಿಯಾದವು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ ಹಾಕಿ ತಂಡವನ್ನ ಮುನ್ನಡೆಸಿದ್ದ ಮನ್‌ಪ್ರೀತ್, ತಂಡದ ಆಟಗಾರರನ್ನು ಹುರಿದುಂಬಿಸಿದ್ದರು.

‘ನಿಮ್ಮ ಸಾಮರ್ಥ್ಯದಲ್ಲಿ ವಿಶ್ವಾಸವಿಡಿ. ಚೆನ್ನಾಗಿ ಆಡಿ ಎಂದಷ್ಟೇ ಹೇಳಿದ್ದೆ. ಈ ಹುಡುಗರಲ್ಲಿ ಹೋರಾಟ ಮನೋಭಾವ ತುಂಬಿದೆ. ಎರಡನೇ ಪಂದ್ಯದಿಂದ ಅವರು ಪುಟಿದೆದ್ದರು. ನಾವು ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ’ ಎಂದು ಮನ್‌ಪ್ರೀತ್ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮನಮುಟ್ಟಿದ ಮನಪ್ರೀತ್ ಮಾತು

ಬಿ ಗುಂಪಿನ ಮೊದಲ ಪಂದ್ಯದಲ್ಲಿ ಆಘಾತ ಅನುಭವಿಸಿದ್ದ ಭಾರತ ತಂಡಕ್ಕೆ ಸೀನಿಯರ್ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಅವರು ನೀಡಿದ ಸಲಹೆಗಳು ಪ್ರೇರಣಾದಾಯಿಯಾದವು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ ಹಾಕಿ ತಂಡವನ್ನ ಮುನ್ನಡೆಸಿದ್ದ ಮನ್‌ಪ್ರೀತ್, ತಂಡದ ಆಟಗಾರರನ್ನು ಹುರಿದುಂಬಿಸಿದ್ದರು.

‘ನಿಮ್ಮ ಸಾಮರ್ಥ್ಯದಲ್ಲಿ ವಿಶ್ವಾಸವಿಡಿ. ಚೆನ್ನಾಗಿ ಆಡಿ ಎಂದಷ್ಟೇ ಹೇಳಿದ್ದೆ. ಈ ಹುಡುಗರಲ್ಲಿ ಹೋರಾಟ ಮನೋಭಾವ ತುಂಬಿದೆ. ಎರಡನೇ ಪಂದ್ಯದಿಂದ ಅವರು ಪುಟಿದೆದ್ದರು. ನಾವು ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ’ ಎಂದು ಮನ್‌ಪ್ರೀತ್ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT