ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಂಥರ್ಸ್‌ ಗೆಲುವಿನಲ್ಲಿ ಮಿಂಚಿದ ಹೂಡಾ

Last Updated 31 ಜುಲೈ 2019, 19:03 IST
ಅಕ್ಷರ ಗಾತ್ರ

ಮುಂಬೈ: ದೀಪಕ್‌ ನಿವಾಸ್‌ ಹೂಡಾ ಅವರ ಆಮೋಘ ರೈಡಿಂಗ್‌ ಬಲದಿಂದ ಜೈಪುರದ ಪಿಂಕ್‌ ಪ್ಯಾಂಥರ್ಸ್‌ ತಂಡ, ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಬುಧವಾರ ಹರಿಯಾಣ ಸ್ಟೀಲರ್ಸ್‌ ತಂಡವನ್ನು 37–21ರಲ್ಲಿ 16 ಪಾಯಿಂಟ್‌ಗಳಿಂದ ಸೋಲಿಸಿತು.

ಎನ್‌ಎಸ್‌ಸಿಐ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದೀಪಕ್‌ ನಿವಾಸ್‌ ಒಂದು ಬೋನಸ್‌ ಸೇರಿ 14 ರೈಡಿಂಗ್‌ ಪಾಯಿಂಟ್‌ ಗಳಿಸಿಕೊಟ್ಟು ಗಮನ ಸೆಳೆದರು. ಟ್ಯಾಕ್ಲಿಂಗ್‌ನಲ್ಲಿ ಸಂದೀಪ್‌ ಧುಲ್‌ ಸತತ ಎರಡನೇ ಬಾರಿ ಆರು ಪಾಯಿಂಟ್‌ಗಳನ್ನು ಗಳಿಸಿಕೊಟ್ಟರು.

ಹರಿಯಾಣ ಪರ ಸುನೀಲ್‌ ಉತ್ತಮ ಪ್ರದರ್ಶನ ಮುಂದುವರಿಸಿ ಟ್ಯಾಕ್ಲಿಂಗ್‌ನಲ್ಲಿ ಆರು ಪಾಯಿಂಟ್‌ ತಂದುಕೊಟ್ಟರೆ, ರೈಡಿಂಗ್‌ನಲ್ಲಿ ವಿನಯ್‌ ಕೂಡ ಆರು ಪಾಯಿಂಟ್‌ ಗಳಿಸಿದರು. ಪ್ಯಾಂಥರ್ಸ್‌ನ ಮಾಲಕರಾದ ಅಮಿತಾಭ್‌ ಬಚ್ಚನ್‌ ಮತ್ತು ಅಭಿಷೇಕ್‌ ಬಚ್ಚನ್‌ ತಮ್ಮ ತಂಡಕ್ಕೆ ಹರ್ಷೋದ್ಗಾರ ಮಾಡಿದರು. ವಿರಾಮದ ವೇಳೆ ಈ ತಂಡ 13–8ರಲ್ಲಿ ಮುಂದಿತ್ತು.

ಇನ್ನೊಂದು ಪಂದ್ಯದಲ್ಲಿ ಯು.ಪಿ.ಯೋಧಾ ತಂಡ 27–23ರಲ್ಲಿ ನಾಲ್ಕು ಪಾಯಿಂಟ್‌ಗಳಿಂದ ಯು ಮುಂಬಾ ತಂಡವನ್ನು ಮಣಿಸಿತು. ವಿರಾಮದ ವೇಳೆ ವಿಜೇತರು 15–12 ಪಾಯಿಂಟ್‌ಗಳಿಂದ ಮುಂದಿದ್ದರು. ಯೋಧಾ ತಂಡದ ಮೋನು ಗೋಯತ್ ರೈಡಿಂಗ್‌ನಲ್ಲಿ ಮತ್ತು ಸುಮಿತ್‌ ಟ್ಯಾಕ್ಲಿಂಗ್‌ನಲ್ಲಿ ಮಿಂಚಿದರು.

ಗುರುವಾರದ ಪಂದ್ಯ: ಫಾರ್ಚೂನ್‌ ಜೈಂಟ್ಸ್‌– ದಬಾಂಗ್ ಡೆಲ್ಲಿ (ರಾತ್ರಿ 7.30).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT