ಕಬಡ್ಡಿ: ಭಾರತ ತಂಡಗಳ ಶುಭಾರಂಭ

7

ಕಬಡ್ಡಿ: ಭಾರತ ತಂಡಗಳ ಶುಭಾರಂಭ

Published:
Updated:

ಜಕಾರ್ತ: ಭಾರತದ ಪುರುಷರ ಮತ್ತು ಮಹಿಳಾ ಕಬಡ್ಡಿ ತಂಡಗಳು ಏಷ್ಯನ್‌ ಕೂಟದಲ್ಲಿ ಶುಭಾರಂಭ ಮಾಡಿವೆ.

ಭಾನುವಾರ ನಡೆದ ‘ಎ’ ಗುಂಪಿನ ತನ್ನ ಮೊದಲ ಹಣಾಹಣಿಯಲ್ಲಿ ಅಜಯ್‌ ಠಾಕೂರ್‌ ಸಾರಥ್ಯದ ಪುರುಷರ ತಂಡ 50–21 ಪಾಯಿಂಟ್ಸ್‌ನಿಂದ ಬಾಂಗ್ಲಾದೇಶವನ್ನು ಮಣಿಸಿತು.

ಎರಡನೆ ಹಣಾಹಣಿಯಲ್ಲಿ ಈ ತಂಡ 44–28 ಪಾಯಿಂಟ್ಸ್‌ನಿಂದ ಶ್ರೀಲಂಕಾ ಎದುರು ಗೆದ್ದಿತು.

2014ರ ಇಂಚೆನ್‌ ಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತ ತಂಡಕ್ಕೆ ಶ್ರೀಲಂಕಾ ಮತ್ತು ಬಾಂಗ್ಲಾ ತಂಡಗಳು ಸಾಟಿಯಾಗಲಿಲ್ಲ.

ಎರಡು ಪಂದ್ಯಗಳಲ್ಲೂ ಅಜಯ್‌ ಬಳಗ ರೈಡಿಂಗ್‌ ಮತ್ತು ರಕ್ಷಣಾ ವಿಭಾಗದಲ್ಲಿ ಪರಿಣಾಮಕಾರಿ ಸಾಮರ್ಥ್ಯ ತೋರಿ ಅಭಿಮಾನಿಗಳನ್ನು ರಂಜಿಸಿತು.

ಸೋಮವಾರ ನಡೆಯುವ ಪಂದ್ಯದಲ್ಲಿ ಅಜಯ್‌ ಪಡೆ, ದಕ್ಷಿಣ ಕೊರಿಯಾ ಎದುರು ಸೆಣಸಲಿದೆ.

ಮಹಿಳಾ ವಿಭಾಗದ ‘ಎ’ ಗುಂಪಿನ ಹಣಾಹಣಿಯಲ್ಲಿ ಭಾರತ ತಂಡ 43–12 ಪಾಯಿಂಟ್ಸ್‌ನಿಂದ ಜಪಾನ್‌ ಎದುರು ವಿಜಯಿಯಾಯಿತು.

ಸೋಮವಾರ ನಡೆಯುವ ಪಂದ್ಯದಲ್ಲಿ ಭಾರತ ತಂಡ ಥಾಯ್ಲೆಂಡ್‌ ಸವಾಲು ಎದುರಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !