ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿ: ಡೆಲ್ಲಿ ತಂಡಕ್ಕೆ ಸತತ ಐದನೇ ಜಯ

Last Updated 21 ಮೇ 2019, 19:08 IST
ಅಕ್ಷರ ಗಾತ್ರ

ಪುಣೆ: ದಿಲಾರ್‌ ಡೆಲ್ಲಿ ತಂಡದವರು ಇಂಡೊ ಇಂಟರ್‌ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ನಲ್ಲಿ ಸತತ ಐದನೇ ಗೆಲುವು ದಾಖಲಿಸಿದ್ದಾರೆ.

ಇಲ್ಲಿನ ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಮಂಗಳವಾರ ನಡೆದ ‘ಬಿ’ ವಲಯದ ಪಂದ್ಯದಲ್ಲಿ ಡೆಲ್ಲಿ 45–36 ಪಾಯಿಂಟ್ಸ್‌ನಿಂದ ಮುಂಬೈ ಚೇ ರಾಜೆ ತಂಡವನ್ನು ಪರಾಭವಗೊಳಿಸಿತು.

ಡೆಲ್ಲಿ ತಂಡದ ರೈಡರ್‌ ಸುನೀಲ್‌ ಜೈಪಾಲ್‌ 10 ಪಾಯಿಂಟ್ಸ್‌ ಕಲೆಹಾಕಿ ಗಮನ ಸೆಳೆದರು.

ಚೆನ್ನೈಗೆ ರೋಚಕ ಗೆಲುವು: ಇನ್ನೊಂದು ಪಂದ್ಯದಲ್ಲಿ ಚೆನ್ನೈ ಚಾಲೆಂಜರ್ಸ್‌ ತಂಡವು ರೋಚಕ ಗೆಲುವು ದಾಖಲಿಸಿತು.

ಚೆನ್ನೈ 33–32 ಪಾಯಿಂಟ್ಸ್‌ನಿಂದ ತೆಲುಗು ಬುಲ್ಸ್‌ ತಂಡವನ್ನು ಸೋಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT