ರಾಜ್ಯ ಬಾಲಕರ ಕಬಡ್ಡಿ ತಂಡಕ್ಕೆ ಲಿಖಿತ್ ಆಯ್ಕೆ

7

ರಾಜ್ಯ ಬಾಲಕರ ಕಬಡ್ಡಿ ತಂಡಕ್ಕೆ ಲಿಖಿತ್ ಆಯ್ಕೆ

Published:
Updated:
Deccan Herald

ಚಿಕ್ಕಬಳ್ಳಾಪುರ: ನಗರದ ಕೆ.ವಿ. ಇಂಗ್ಲಿಷ್ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿ ವಿ.ಲಿಖಿತ್ 17 ವರ್ಷದೊಳಗಿನವರ ರಾಜ್ಯ ಬಾಲಕರ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದಾನೆ.

ಸೆಪ್ಟೆಂಬರ್ 10,11 ರಂದು ಪಂಜಾಬ್‌ನ ಅಮೃತಸರದಲ್ಲಿ ನಡೆಯಲಿರುವ ಐಸಿಎಸ್‌ಸಿಐ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಲಿಖಿತ್ ಆಡಲಿದ್ದಾನೆ. ಕೆ.ವಿ. ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ವಿ. ನವೀನ್ ಕಿರಣ್, ಪ್ರಾಂಶುಪಾಲ ತ್ಯಾಗರಾಜ್, ಮುಖ್ಯ ಶಿಕ್ಷಕ ಗಿರೀಶ್, ದೈಹಿಕ ವಿಭಾಗದ ನಿರ್ದೇಶಕ ಶಕ್ತಿವೇಲು ಅವರು ಈ ಸಾಧನೆಗಾಗಿ ಲಿಖಿತ್‌ಗೆ ಅಭಿನಂದಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !