ಶನಿವಾರ, ನವೆಂಬರ್ 23, 2019
18 °C

ಹದಗೆಟ್ಟ ಟ್ರ್ಯಾಕ್‌ನಲ್ಲಿ ಕ್ರೀಡಾಕೂಟ

Published:
Updated:

ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ಬೆಂಗಳೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ ನಡೆಯಿತು. ಹದಗೆಟ್ಟಿರುವ ಸಿಂಥೆಟಿಕ್ ಟ್ರ್ಯಾಕ್‌ ಬಗ್ಗೆ ಅಥ್ಲೀಟ್‌ಗಳು ಮಾತನಾಡಿ ಕೊಳ್ಳುತ್ತಿದ್ದರು. ಆದರೆ ತೊಂದರೆಗಳ ಬಹಿರಂಗವಾಗಿ ಮಾತನಾಡಲು ಯಾರೂ ಮುಂದಾಗಲಿಲ್ಲ. ಹೆಚ್ಚಿನವರು ಕ್ರೀಡಾ ವಸತಿ ನಿಲಯಗಳ ಅಥ್ಲೀಟ್‌ಗಳು. ಆದ್ದರಿಂದ ಅವರಾಗಲಿ, ಅವರ ಕೋಚ್‌ ಗಳಾಗಲಿ ‘ದೊಡ್ಡವರ’ ಕೆಂಗಣ್ಣಿಗೆ ಗುರಿಯಾಗಲು ಬಯಸಲಿಲ್ಲ.

‘ಸಮಸ್ಯೆ ಹೇಳಿಕೊಳ್ಳುವುದು ಹೇಗೆ’ ಎಂದು ಕೋಚ್‌ ಒಬ್ಬರು ಅಸ ಹಾಯಕತೆ ವ್ಯಕ್ತಪಡಿಸಿದರು. ‘ಸದ್ಯದಲ್ಲೇ ರಾಷ್ಟ್ರೀಯ ಕ್ರೀಡಾಕೂಟ ನಡೆಯಲಿರುವುದರಿಂದ ಪ್ರಮುಖರು ಸ್ಪರ್ಧಿಸುತ್ತಿಲ್ಲ. ಆದ್ದರಿಂದ ದೂರುಗಳು ಕೇಳಿಬಂದಿಲ್ಲ’ ಎಂದು ಮತ್ತೊಬ್ಬರು ಕೋಚ್ ಅಭಿಪ್ರಾಯಪಟ್ಟರು.

ಪ್ರತಿಕ್ರಿಯಿಸಿ (+)