ಬ್ಯಾಸ್ಕೆಟ್‌ಬಾಲ್‌: ಸೆಮಿಗೆ ರಾಜ್ಯ ತಂಡಗಳು

7

ಬ್ಯಾಸ್ಕೆಟ್‌ಬಾಲ್‌: ಸೆಮಿಗೆ ರಾಜ್ಯ ತಂಡಗಳು

Published:
Updated:
Deccan Herald

ಬೆಂಗಳೂರು: ಕರ್ನಾಟಕದ ಬಾಲಕರ ಮತ್ತು ಬಾಲಕಿಯರ ತಂಡದವರು ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಯೂತ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಬಾಲಕರ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕ 82–78 ಪಾಯಿಂಟ್ಸ್‌ನಿಂದ ಪಂಜಾಬ್‌ ಎದುರು ಗೆದ್ದಿತು.

ಮೊದಲಾರ್ಧದಲ್ಲಿ 38–46ರಿಂದ ಹಿನ್ನಡೆ ಕಂಡಿದ್ದ ರಾಜ್ಯ ತಂಡ ದ್ವಿತೀಯಾರ್ಧದಲ್ಲಿ ಮಿಂಚಿತು. ಅನಿಕೇತ್ ಮತ್ತು ಅಚಿಂತ್ಯಾ ಕ್ರಮವಾಗಿ 22 ಮತ್ತು 18 ಪಾಯಿಂಟ್ಸ್‌ ಗಳಿಸಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಇದಕ್ಕೂ ಮೊದಲು ನಡೆದಿದ್ದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕ 72–71 ಪಾಯಿಂಟ್ಸ್‌ನಿಂದ ಛತ್ತೀಸಗಡ ತಂಡದ ವಿರುದ್ಧ ರೋಚಕ ಗೆಲುವು ದಾಖಲಿಸಿತ್ತು.

ಬಾಲಕಿಯರ ವಿಭಾಗದ ಎಂಟರ ಘಟ್ಟದ ಪೈಪೋಟಿಯಲ್ಲಿ ಕರ್ನಾಟಕ 51–39 ಪಾಯಿಂಟ್ಸ್‌ನಿಂದ ಉತ್ತರ ಪ್ರದೇಶವನ್ನು ಸೋಲಿಸಿತು.

ಮೊದಲಾರ್ಧದ ಅಂತ್ಯಕ್ಕೆ 38–21ರಿಂದ ಮುನ್ನಡೆ ಗಳಿಸಿದ್ದ ರಾಜ್ಯ ತಂಡದ ಬಾಲಕಿಯರು ದ್ವಿತೀಯಾರ್ಧದಲ್ಲೂ ಮೇಲುಗೈ ಸಾಧಿಸಿದರು.

ರಾಜ್ಯ ತಂಡದ ಅನಘಾ ಮತ್ತು ಮಾಯಾ ಅವರು ಕ್ರಮವಾಗಿ 12 ಹಾಗೂ 10 ಪಾಯಿಂಟ್ಸ್‌ ಕಲೆಹಾಕಿದರು.

ಹದಿನಾರರ ಘಟ್ಟದ ಹಣಾಹಣಿಯಲ್ಲಿ ಕರ್ನಾಟಕ 67–40 ಪಾಯಿಂಟ್ಸ್‌ನಿಂದ ದೆಹಲಿ ತಂಡವನ್ನು ಸೋಲಿಸಿತ್ತು.

ಶನಿವಾರ ನಡೆಯುವ ನಾಲ್ಕರ ಘಟ್ಟದ ಪಂದ್ಯದಲ್ಲಿ ಬಾಲಕಿಯರ ತಂಡ ಛತ್ತೀಸಗಡದ ಎದುರು ಸೆಣಸಲಿದೆ. ಸೆಮಿಫೈನಲ್‌ನಲ್ಲಿ ಬಾಲಕರ ತಂಡ ರಾಜಸ್ಥಾನದ ವಿರುದ್ಧ ಆಡಲಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !